ಮಕರಜ್ಯೋತಿ ೧೪ರಂದು: ಚಿನ್ನಾಭರಣ ಶೋಭಾಯಾತ್ರೆ ಆರಂಭ

0
43

ಶಬರಿಮಲೆ: ಮಕರ ಜ್ಯೋತಿ ಉತ್ಸವದಂಗವಾಗಿ ಈ ತಿಂಗಳ ೧೯ರವರೆಗೆ ಮಾತ್ರ ಭಕ್ತರಿಗೆ ದರ್ಶನ ಅವಕಾಶವಿರುತ್ತದೆ. ಅಂದು ಸಂಜೆ ೫ ಗಂಟೆಗೆ ಪಂಪಾಕ್ಕೆ ತಲುಪುವವರಿಗೆ ದರ್ಶನ ಲಭಿಸುವುದು. ರಾತ್ರಿ ೯.೩೦ಕ್ಕೆ ಅತ್ತಾಳ ಪೂಜೆವರೆಗೆ ಭಕ್ತರಿಗೆ ಅಯ್ಯಪ್ಪನ ದರ್ಶಿಸಲು ಅವಕಾಶವಿರುತ್ತದೆ.

ಮಕರ ಜ್ಯೋತಿಗೆ ಇನ್ನು ಎರಡು ದಿನ ಮಾತ್ರ ಬಾಕಿ ಇರುವಂತೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಮಕರ ಜ್ಯೋತಿಯನ್ನು ವೀಕ್ಷಿಸಲು ಶಬರಿ ಮಲೆಯ ಸುತ್ತುಮುತ್ತ ೯ಕಡೆಗಳಲ್ಲಿ ಸೌಕರ್ಯ ಏರ್ಪಡಿಸ ಲಾಗಿದೆ. ಪಾಂಡಿ ತ್ತಾವಳದಲ್ಲಿ ೩ ಕೇಂದ್ರ, ಸೋಪಾನ, ತಾಳೆತಿಂಬ ಮುಟ್ಟಂ, ಮಾಳಿಗಪುರಂ, ಅಕಮಡೇಶನ್ ಕಚೇರಿಯ ಮೇಲ್ಭಾಗದ ತಾತ್ಕಾಲಿಕ ಕಟ್ಟಡ, ಎನ್.ಎಸ್.ಎಸ್. ಆಸ್ಪತ್ರೆ ಬಳಿ, ಬಿ.ಎಸ್.ಎನ್.ಎಲ್. ಕಚೇರಿ ಮುಂಭಾಗ ಎಂಬೆಡೆಗಳಲ್ಲಿ ಮಕರ ಜ್ಯೋತಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಕರ ಜ್ಯೋತಿಯ ವೇಳೆ ಅಯ್ಯ ಪ್ಪನಿಗೆ ತೊಡಿಸಲಿರುವ ಚಿನ್ನಾಭರಣಗಳ ಶೋಭಾಯಾತ್ರೆ ಇಂದು ಪಂದಳಂ ಅರಮನೆಯಿಂದ ಹೊರಟಿತು. ಗುರುಸ್ವಾಮಿಯ ನೇತೃತ್ವದಲ್ಲಿ ತಲೆಯಲ್ಲಿ ಹೊತ್ತುಕೊಂಡು ೨೫ ಮಂದಿಯ ತಂಡ ಈ ಆಭರಣಗಳನ್ನು ಶಬರಿಮಲೆಗೆ ಕೊಂಡು ಹೋಗಲಾಗುತ್ತದೆ. ಪಂದಳಂ ರಾಜರ ಪ್ರತಿನಿಧಿಯಾಗಿ ಪಿ. ರಾಘವ ವರ್ಮ ಈ ಬಾರಿಯ ಶೋಭಾ ಯಾತ್ರೆಯನ್ನು ಮುನ್ನಡೆಸುವರು.

NO COMMENTS

LEAVE A REPLY