ಮಹಿಳಾ ಗೋಡೆ: ಬಸ್ಸಿಗೆ ಕಲ್ಲು ತೂರಾಟ; ಇಬ್ಬರ ಸೆರೆ

0
28

ಕಾಸರಗೋಡು: ಜನವರಿ ೧ರಂದು ನಡೆದ ಮಹಿಳಾ ಗೋಡೆ ಯಲ್ಲಿ ಭಾಗವಹಿಸಿ ಕಾರ್ಯಕರ್ತರು ಹಿಂತಿರು ಗುತ್ತಿದ್ದ ಬಸ್ಸಿಗೆ ಮಾಯಿಪ್ಪಾಡಿ ಬಳಿ ಕಲ್ಲು ತೂರಾಟ ನಡೆಸಿ ಮೂರು ಮಹಿಳೆಯರೂ ಸೇರಿದಂತೆ ನಾಲ್ವರು ಗಾಯ ಗೊಂಡ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಿದ್ಯಾನಗರ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ಎಸ್.ಐ ವಿಪಿನ್ ಬಂಧಿಸಿದ್ದಾರೆ. ಮಾಯಿಪ್ಪಾಡಿ ಕುದ್ರೆಪ್ಪಾಡಿ ಪರಿಸರ ನಿವಾಸಿ ಗಳಾದ ಸತ್ಯರಾಜ್(೨೨)ಮತ್ತು ಕಿರಣ್(೨೨) ಬಂಧಿತರಾದ ಆರೋಪಿಗಳಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಬಂಧಿತರ ವಿರುದ್ಧ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY