ಶಬರಿಮಲೆ ದರ್ಶನ ಕೋರಿ ಕೆ.ಸುರೇಂದ್ರನ್ ಅರ್ಜಿ

0
55

ಕೊಚ್ಚಿ: ಮಕರ ಜ್ಯೋತಿ ಉತ್ಸವದ ವೇಳೆ ಶಬರಿಮಲೆದರ್ಶನ ನಡೆಸಲು ಅನುಕೂಲಕರವಾದ ರೀತಿಯಲ್ಲಿ ತನ್ನ ಜಾಮೀನು ವ್ಯವಸ್ಥೆ ಯಲ್ಲಿ ರಿಯಾಯಿತಿ ನೀಡಬೇಕೆಂದು ಕೋರಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯ ರಾಜ್ಯ ಸರಕಾರದ ನಿಲುವನ್ನು ಕೇಳಿದೆ.  ಅರ್ಜಿಯ ಪರಿಗಣನೆಯನ್ನು ಸೋಮವಾರಕ್ಕೆ ಮುಂದೂಡಿದೆ. ಈ ಹಿಂದೆ ತಾನು ಇರುಮುಡಿ ಕಟ್ಟಿನೊಂದಿಗೆ ಶಬರಿಮಲೆಗೆ ಹೋಗುವ ವೇಳೆ ಪೊಲೀಸರು ತನ್ನನ್ನು ತಡೆಗಟ್ಟಿ ಬಂಧಿಸಿದ್ದರು. ಶಬರಿಮಲೆ ದರ್ಶನಕ್ಕೆ ಕಟ್ಟಿರಿಸಲಾ ಗಿದ್ದ ಇರುಮುಡಿ ಕಟ್ಟಿನೊಂದಿಗೆ ಶಬರಿಮಲೆ ದರ್ಶನ ನಡೆಸಿ ಅದನ್ನು ಅಲ್ಲಿ ಬಿಚ್ಚಲು ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ಸುರೇಂದ್ರನ್ ಕೇಳಿಕೊಂಡಿದ್ದಾರೆ.

NO COMMENTS

LEAVE A REPLY