ಮಕರ ಸಂಕ್ರಮಣ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ

0
28

ಶಬರಿಮಲೆ:  ಶಬರಿಮಲೆಯಲ್ಲಿ ಇಂದು ಸಂಜೆ ಮಕರ ಸಂಕ್ರಾಂತಿ ಜ್ಯೋತಿ ಬೆಳಗಲಿದ್ದು ಅದಕ್ಕಾಗಿರುವ ಕ್ಷಣಗಣನೆ ಆರಂಭಗೊಂಡಿದೆ. ಪಂದಳಂ ಅರಮನೆಯಿಂದ ಆರಂಭ ಗೊಂಡ ಶ್ರೀ ದೇವರ ಚಿನ್ನದೊಡವೆಗಳ ಶೋಭಾಯಾತ್ರೆ ಪಂದಳಂ ಅರಮನೆಯ ಪ್ರತಿನಿಧಿಗಳೊಂದಿಗೆ ಇಂದು ಸಂಜೆ ೬ ಗಂಟೆಗೆ ಸನ್ನಿಧಾನಕ್ಕೆ ಸೇರಲಿದೆ. ಬಳಿಕ ದೇಗುಲದ ಧ್ವಜಸ್ತಂಭದ ಬಳಿ  ಮುಜುರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್ ನೇತೃತ್ವದಲ್ಲಿ ಚಿನ್ನದೊಡವೆಗಳನ್ನು ಸ್ವೀಕರಿಸಲಾಗುವುದು. ಬಳಿಕ ಸೋಪಾನೆಗೆ ತಲುಪುವ ಚಿನ್ನದೊಡ ವೆಗಳನ್ನು ತಂತ್ರಿ ಕಂಠರರ್  ರಾಜೀವರ್, ಪ್ರಧಾನ ಅರ್ಚಕ ವಿ.ಎಸ್. ವಾಸುದೇವನ್ ನಂಬೂದಿರಿಯರ್ ಪಡೆದುಕೊಳ್ಳುವರು. ಸಂಜೆ ೬.೩೦ಕ್ಕೆ ಅಯ್ಯಪ್ಪ ವಿಗ್ರಹಕ್ಕೆ ಚಿನ್ನದೊಡವೆಗಳನ್ನು ಅಲಂಕರಿಸಿ ದೀಪಾರಾಧನೆ ನಡೆಯಲಿದೆ.  ಆ ಬಳಿಕ ಮಕರ ಜ್ಯೋತಿ ದರ್ಶನ ನಡೆಯಲಿದೆ.

ಸಾಧಾರಣ ರೀತಿಗಿಂತ ಭಿನ್ನವಾಗಿ ಮಕರ ಸಂಕ್ರಾಂತಿ ಪೂಜೆ ಈ ಬಾರಿ ಜ್ಯೋತಿ ದರ್ಶನದ ಬಳಿಕ ನಡೆಯಲಿದೆ. ಸಂಧ್ಯಾವೇಳೆ ೭.೫೨ರ ಮುಹೂರ್ತದಲ್ಲಿ ಮಕರ ಸಂಕ್ರಾಂತಿ ಪೂಜೆ ನಡೆಯಲಿದೆ. ಪೂಜೆ ಮಧ್ಯೆ ತಿರುವಿದಾಂಕೂರು ಅರಮನೆಯಿಂದ ತರಲಾದ ತುಪ್ಪ ತುಂಬಿಸಿದ ತೆಂಗಿನಕಾಯಿ ಒಡೆದು ಶ್ರೀ ದೇವರ ವಿಗ್ರಹದ ಅಭಿಷೇಕ ನಡೆಸಲಾಗುವು ದು. ಇದಕ್ಕಾಗಿರುವ ತುಪ್ಪ ತುಂಬಿಸಿದ ತೆಂಗಿನ ಕಾಯಿಗಳನ್ನು ತಿರುವಿದಾಂಕೂರು ರಾಜ್ಯಸ್ಥಾನೀಯ ಶ್ರೀ ಮೂಲಂ ರಾಮವರ್ಮರು ನಿನ್ನೆ ಸಂಜೆ ಅರಮನೆಯ ಪ್ರತಿನಿಧಿಗ ಳ ಮೂಲಕ ಶ್ರೀ ಕ್ಷೇತ್ರಕ್ಕೆ ತಲುಪಿಸಿ ತಂತ್ರಿಗಳಿಗೂ ಹಸ್ತಾಂತರಿಸಿದ್ದಾರೆ.

ಮಕರ ಜ್ಯೋತಿ ಉತ್ಸವದಂಗವಾಗಿ ಜನವರಿ ೧೯ರ ತನಕ ಶ್ರೀ ದೇಗುಲದ ಗರ್ಭಗುಡಿ ತೆರೆದು ಭಕ್ತರಿಗೆ ದರ್ಶನಕ್ಕಾಗಿ ತೆರೆದುಕೊಡಲಾಗುವುದು. ಅಂದು ರಾತ್ರಿ ಗರ್ಭಗುಡಿ ಬಾಗಿಲು ಮುಚ್ಚಿದ ಬಳಿಕ ಮಾಳಿಗಪುರತ್ತಮ್ಮ ದೇಗುಲದ ಸನ್ನಿಧಾನದಲ್ಲಿ ಅಂತಿಮ ಹಂತದ ಧಾರ್ಮಿಕ ಕ್ರಮಗಳು ನಡೆಯಲಿದೆ.

NO COMMENTS

LEAVE A REPLY