ಕನ್ನಡ ಪಾಠಕ್ಕೆ ಮಲಯಾಳ ಅಧ್ಯಾಪಕರು: ಪ್ರವೇಶ ತಡೆಯಲು ಗೇಟಿನಲ್ಲಿ ಮಕ್ಕಳಿಂದ  ಪ್ರತಿಭಟನೆ

0
34

ಪೈವಳಿಕೆ: ಕನ್ನಡಮಾಧ್ಯಮ ಮಕ್ಕಳು ಮಲಯಾಳ ಭಾಷೆಯ, ಕನ್ನಡ ತಿಳಿಯದ ಅಧ್ಯಾಪಕರನ್ನು ನೇಮಕ ಮಾಡಲಾಗಿದ್ದು, ಇವರು ಶಾಲೆಗೆ ಉದ್ಯೋಗಕ್ಕೆ ಸೇರಲು ಕೊನೆಯ ದಿನವಾದ ಇಂದು ಶಾಲೆಗಳಲ್ಲಿ ಮಕ್ಕಳು, ಹೆತ್ತವರು ಪ್ರತಿಭಟನೆ ನಿರತರಾಗಿದ್ದಾರೆ.

ಉಪ್ಪಳ ಬಳಿಯ ಬೇಕೂರು ಸರಕಾರಿ ಶಾಲೆ ಹಾಗೂ ಕಾಯರ್ ಕಟ್ಟೆ ಶಾಲೆಗೆ ಇಂದು ಇಬ್ಬರು ಮಲಯಾಳ ಅಧ್ಯಾಪಕರು ಕನ್ನಡ ಮಕ್ಕಳಿಗೆ ಪಾಠ ಮಾಡಲು ಇಂದು ಶಾಲೆಗೆ ಸೇರುವರೆಂಬ ಹಿನ್ನೆಲೆಯಲ್ಲಿ ಇವರನ್ನು ತಡೆದು ಪ್ರತಿಭಟಿಸಲು ಮಕ್ಕಳು ಹಾಗೂ ಹೆತ್ತವರು, ಊರವರು, ಜನಪ್ರತಿಧಿಗಳು ಸಿದ್ಧರಾಗಿ ನಿಂತಿದ್ದಾರೆ. 

ಬೇಕೂರು ಶಾಲೆಯ ಹೈಸ್ಕೂಲ್ ವಿಭಾಗದ ಮೂಲ ವಿಜ್ಞಾನ ವಿಷಯಕ್ಕೆ ಕಲಿಸಲು ಕನ್ನಡದ ಗಂಧಗಾಳಿ ತಿಳಿಯದ ತಿರುವನಂತಪುರದ ನಿವಾಸಿ ನಿಭಾ ಆರ್.ಆರ್‌ರನ್ನು ನೇಮಕಮಾಡಿ ಲೋಕಸೇವಾ ಆಯೋಗ ಆದೇಶ ಹೊರಡಿಸಿದೆ. ಇದರಂತೆ ಇವರು ಕೆಲಸಕ್ಕೆ ಹಾಜರಾಗಲು ಇಂದು ಕೊನೆಯ ದಿನವಾಗಿದೆ. ಮೊನ್ನೆ ಶಾಲೆಗ ತಲುಪಿದ ಇವರನ್ನು ಮಕ್ಕಳು, ಕನ್ನಡಿಗರು ತಡೆದಿದ್ದರು. ಈ ಹಿನ್ನೆಲೆಯಲ್ಲಿ ಅವರು ಹಿಂತಿರುಗಿದ್ದು, ಮಂಜೇಶ್ವರ ಠಾಣೆಗೆ ದೂರು ನೀಡಿದ್ದರು.

ಇಂದು ಬೆಳಿಗ್ಗೆ ಈ ಅಧ್ಯಾಪಿಕೆ ಶಾಲೆಗೆ ಬರುವುದಾಗಿ ಕನ್ನಡ ಮಕ್ಕಳು ತರಗತಿ ಬಹಿಷ್ಕರಿಸಿ ಶಾಲಾ ಗೇಟಿನ ಬಳಿ ಪ್ರತಿಭಟನೆ ನಿರತರಾದರು. ಇವರ ಜೊತೆಯಲ್ಲಿ ಮಕ್ಕಳ ಹೆತ್ತವರು, ಪಿಟಿಎ, ಎಂಪಿಟಿಎ, ಜನಪ್ರತಿನಿಧಿಗಳು ಸೇರಿಕೊಂಡಿದ್ದು, ಯಾವುದೇ ಬೆಲೆ ತೆತ್ತಾದರೂ ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳ ಅಧ್ಯಾಪಿಕೆಯನ್ನು ನೇಮಕಗೊಳಿಸಲು ಬಿಡೆವು ಎಂದು ತಿಳಿಸಿದ್ದಾರೆ. ಇವರಿಗೆ ಬೆಂಬಲವಾಗಿ ಕನ್ನಡ ಹೋರಾಟ ಸಮಿತಿ, ಕನ್ನಡ ಸಂಘಟನೆಗಳು ರಂಗಕ್ಕಿಳಿದಿದ್ದು, ಕೆ. ಭಾಸ್ಕರ, ಜಿ.ಪಂ. ಸದಸ್ಯ ಹರ್ಷಾದ್ ವರ್ಕಾಡಿ ಸ್ಥಳಕ್ಕೆ ತಲುಪಿದ್ದಾರೆ. ಪ್ರತಿಭಟನಾ ನಿರತರಲ್ಲಿ ಮಾತನಾಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಡಿಡಿ ಕೂಡಾ ಸ್ಥಳಕ್ಕೆ ತಲುಪಿದ್ದಾರೆ.

 

NO COMMENTS

LEAVE A REPLY