ವಾಟ್ಸಪ್‌ನಲ್ಲಿ ಮುಖ್ಯಮಂತ್ರಿ ಅವಹೇಳನ: ೫ ಮಂದಿ ವಿರುದ್ಧ ಕೇಸು

0
30

ಕುಂಬಳೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಅವಹೇಳನಗೈಯ್ಯುವ ರೀತಿಯಲ್ಲಿ ವಾಟ್ಸಪ್‌ನಲ್ಲಿ ಪ್ರಚಾರ ನಡೆಸಿದ ಆರೋಪದಂತೆ ಐದು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಬಣೂರಿನ ದೀಕ್ಷಿತ್, ಶಿರಿಯ ಕುನ್ನು ನಿವಾಸಿಗಳಾದ ಕಮಲಾಕ್ಷ, ಕಾರ್ತಿಕ್, ಕಿರಣ್‌ರಾಜ್ ಯಾನೆ ಚರಣ್‌ರಾಜ್, ಭರತ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಸಿಪಿಎಂ ಮಂಜೇಶ್ವರ ಏರಿಯಾ ಸೆಕ್ರೆಟರಿ ಅಬ್ದುಲ್ ರಜಾಕ್ ಚಿಪ್ಪಾರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಆರೋಪಿಗಳ ಪೈಕಿ ಕಿರಣ್‌ರಾಜ್ ಯಾನೆ ಚರಣ್‌ರಾಜ್‌ನನ್ನು ಆಕ್ರಮಣ ಪ್ರಕರಣ ಸಂಬಂಧ ಸೆರೆ ಹಿಡಿದಿದ್ದು, ಈತ ರಿಮಾಂಡ್‌ನಲ್ಲಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY