ಬೈಕ್‌ನಲ್ಲಿ ಸಾಗಿಸುತ್ತಿದ್ದ ಮದ್ಯವಶ: ಸವಾರ ಪರಾರಿ

0
31

ಕಾಸರಗೋಡು: ಬೈಕ್‌ನಲ್ಲಿ ಸಾಗಿಸುತ್ತಿದ್ದ ೩.೬೦೦ ಲೀಟರ್ ಗೋವಾ ನಿರ್ಮಿತ ವಿದೇಶ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಿನ್ನೆ ಸಂಜೆ ಕಾಸರಗೋಡು ಆರ್.ಡಿ. ನಗರದಲ್ಲಿ ಕಾಸರಗೋಡು ರೇಂಜ್ ಅಬಕಾರಿ ಇನ್‌ಸ್ಪೆಕ್ಟರ್ ಪಿ.ಎಂ. ಪ್ರವೀಣ್, ಪ್ರಿವೆಂಟಿವ್ ಆಫೀಸರ್ ಎ.ಬಿ. ಅಬ್ದುಲ್ಲರ ನೇತೃತ್ವದಲ್ಲಿ ಕಾರ್ಯಾ ಚರಣೆ ನಡೆಸಲಾಗಿದೆ. ಅಬಕಾರಿ ಅಧಿಕಾರಿಗಳನ್ನು ಕಂಡು ಬೈಕ್ ನಿಲ್ಲಿಸಿ ಸವಾರ ಪರಾರಿ ಯಾಗಿದ್ದಾನೆ. ಬಳಿಕ ಬೈಕ್‌ನ್ನು ಪರಿಶೀಲಿಸಿ ದಾಗ ಅದರಲ್ಲಿ ಮದ್ಯ ಪತ್ತೆಯಾಗಿದೆ. ಈ ಸಂಬಂಧ ಆರ್.ಡಿ. ನಗರದ ಹರೀಶ (೩೭)ನ ವಿರುದ್ಧ ಕೇಸು ದಾಖಲಿಸಲಾಗಿ ದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY