ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ

0
30

ಪುತ್ತಿಗೆ: ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ತಗಲಿ ಭಾರೀ ನಷ್ಟವುಂಟಾದಘಟನೆ ಪುತ್ತಿಗೆ ಪಂ. ಕಚೇರಿ ಬಳಿ ನಿನ್ನೆ ಸಂಜೆ ನಡೆದಿದೆ. ಪೆರ್ಲ ಶಿವಪ್ರಭಾ ಹೌಸ್‌ನ ಶಿವಶಂಕರ ಎಂಬವರ ಲಾರಿಗೆ ಬೆಂಕಿ ತಗಲಿದ್ದು,  ಹುಲ್ಲು ಉರಿದು  ಲಾರಿಯ ಹಿಂದುಗಡೆಗೂ ಹಾನಿಯಾಗಿದೆ. ಆಬಗ್ಗೆ ಮಾಹಿತಿ ಲಭಿಸಿದ ಸ್ಟೇಶನ್ ಆಫೀಸರ್ ಅರುಣ ಕೆ. ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿ ದ್ದಾರೆ. ಇದರಿಂದ ಒಂದು ಲಕ್ಷಕ್ಕಿಂತಲೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ.

NO COMMENTS

LEAVE A REPLY