ಶಾಲೆ ವಿರುದ್ಧ ಅಪಪ್ರಚಾರ ಓರ್ವನ ವಿರುದ್ಧ ಕೇಸು

0
36

ಕಾಸರಗೋಡು: ನೆಲ್ಲಿಕುಂಜೆ ಯಲ್ಲಿರುವ ಸರಕಾರಿ ಹೆಣ್ಮಕ್ಕಳ ಪ್ರೌಢಶಾಲೆಯನ್ನು ಅವಹೇಳನ ಗೈಯ್ಯುವ ರೀತಿಯಲ್ಲಿ ಸಾಮಾಜಿಕ  ತಾಣಗಳಲ್ಲಿ ಅಪಪ್ರಚಾರ ನಡೆಸಿದ ಆರೋಪದಂತೆ ಓರ್ವನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಉಳಿಯತ್ತಡ್ಕ ನಿವಾಸಿ ನೌಫಲ್ (೨೮)ನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತ ಶಾಲೆಯಲ್ಲಿ ಅವಹೇಳನಗೈಯ್ಯುವ ಹಾಗೂ ಕೋಮುಭಾವನೆ ಮೂಡಿಸುವ ರೀತಿಯಲ್ಲಿ ಸಾಮಾಜಿಕ ತಾಣಗಳಲ್ಲಿ ಸಂದೇಶ ಹರಿಯಬಿಟ್ಟಿದ್ದಾನೆಂದು ದೂರ ಲಾಗಿದೆ.  ಈಬಗ್ಗೆ ಶಾಲೆಯ ಪ್ರಾಂಶುಪಾಲೆ ಮಿನಿ ಜೋನ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY