ದುಬಾಗೆ ಸಾಗಿಸುತ್ತಿದ್ದ ೭.೧೪ ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ನೋಟು ವಶ: ಯುವಕ ಸೆರೆ

0
31

ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಅಕ್ರಮವಾಗಿ ವಿದೇಶಕ್ಕೆ ಸಾಗಿಸುತ್ತಿದ್ದ ೭.೧೪ ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಸ್ಟಮ್ಸ್ ತಂಡ ವಶಪಡಿಸಿದೆ. ಈ ಸಂಬಂಧ ಕಾಸರ ಗೋಡಿನ ಅಬ್ದುಲ್ ಹಮೀದ್ ಕೊಡ್ಯಮ್ಮೆ ಎಂಬ ಯುವಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈತ ದುಬಾಗೆ ಹೋಗಲೆಂದು ನಿನ್ನೆ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದನು. ಕಸ್ಟಮ್ಸ್ ತಂಡ ಆತನ ಬ್ಯಾಗ್‌ಗಳನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಮೊದಲು ಏನೂ ಪತ್ತೆಯಾಗಲಿಲ್ಲ. ಆ ವೇಳೆ ಆತನ ನಡವಳಿಕೆಯನ್ನು ಗಮನಿಸಿದ ಅಧಿಕಾರಿಗಳು ದೇಹ ತಪಾಸಣೆ ನಡೆಸಿದಾಗ ಆತ ಧರಿಸಿದ್ದ ಒಳ ಉಡುಪಿನೊಳಗೆ ಬಚ್ಚಿಡಲಾಗಿದ್ದ ವಿದೇಶಿ ಕರೆನ್ಸಿ ನೋಟುಗಳು ಪತ್ತೆಯಾಗಿದೆ.  ವಶಪಡಿಸಲಾದ ನೋಟುಗಳಲ್ಲಿ ೩,೫೭,೨೦೦ ರೂ. ಮೌಲ್ಯದ ೫೦೦೦ ಅಮೆರಿಕನ್ ಡಾಲರ್ ಮತ್ತು ೩,೫೬,೮೦೦ ರೂ. ಮೌಲ್ಯದ ಇತರ ವಿವಿಧ ದೇಶಗಳ ಕರೆನ್ಸಿಗಳು ಒಳಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY