ಕಾಸರಗೋಡು: ನಗರದ ತೆರುವತ್ತ್ ಹೊನ್ನೆಮೂಲೆಯಲ್ಲಿ ಮನೆಗೆ ನುಗ್ಗಿ ಹಣವಿದ್ದ ಬ್ಯಾಗ್ ಕಳವುಗೈದು ಪರಾರಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ಇಲ್ಲಿನ ಅಬ್ದುಲ್ ಖಾದರ್ರ ಮನೆಯ ಅಡುಗೆ ಕೋಣೆಯ ಗ್ರಿಲ್ಸ್ ತುಂಡು ಮಾಡಿ ಒಳನುಗ್ಗಿದ ಕಳ್ಳ ಕಪಾಟಿನಲ್ಲಿದ್ದ ಚಿನ್ನವನ್ನು ತೆಗೆಯುತ್ತಿದ್ದ ವೇಳೆ ಎಚ್ಚೆತ್ತ ಮನೆಯವರು ಬೊಬ್ಬೆ ಹಾಕಿದಾಗ ಚಿನ್ನವನ್ನು ಅಲ್ಲೇ ಬಿಸಾಡಿ, ಕೈಗೆ ಸಿಕ್ಕಿದ ಬ್ಯಾಗನ್ನು ಕದ್ದೊಯ್ದಿದ್ದಾನೆ. ಇದರಲ್ಲಿ ಒಟ್ಟು ೨೦ ಸಾವಿರ ರೂ. ಹಾಗೂ ಒಂದು ಪಾಸ್ಪೋರ್ಟ್ ಇತ್ತೆಂದು ಮನೆ ಮಾಲಕ ತಿಳಿಸಿದ್ದು, ಈ ಬಗ್ಗೆ ದೂರು ದಾಖಲಿಸಿ ಹೆಚ್ಚಿನ ತನಿಖೆ ನಡೆಯುತ್ತಿದೆ.