ಶಬರೀಶನ ಬಿಡದ ಯುವತಿಯರು: ಮತ್ತೆ ೩೫ ಮಂದಿಯಿಂದ ಪ್ರವೇಶಕ್ಕೆ ಸಿದ್ಧತೆ

0
45

ಶಬರಿಮಲೆ: ಕುಂಭ ಮಾಸ ಪೂಜೆಗಾಗಿ ಶಬರಿಮಲೆ ದೇಗುಲದ ಗರ್ಭಗುಡಿ ಬಾಗಿಲು ನಾಳೆ ತೆರೆಯ ಲಿರುವಂತೆಯೇ ಈ ಹಿಂದೆ ರಾತ್ರಿ ಮರೆಯಲ್ಲಿ ವೇಷ ಮರೆಸಿ  ಶಬರಿಮ ಲೆಗೆ ದರ್ಶನ ನಡೆಸಿದ ಮಲಪ್ಪುರದ ಕನಕದುರ್ಗ ಮತ್ತು ಕಲ್ಲಿಕೋಟೆಯ ಬಿಂದು ಸೇರಿದಂತೆ ನವೋತ್ಥಾನ ಫೇಸ್‌ಬುಕ್ ಒಕ್ಕೂಟದ ೩೭ ಮಂದಿ ಯುವತಿಯರು ಮತ್ತೆ ಶಬರಿಮಲೆ ದರ್ಶನಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದೆ.

ಈ ಮಾಹಿತಿ ತಿಳಿದ ಅಯ್ಯಪ್ಪ ಭಕ್ತರ ಮತ್ತು ಹಲವು ಹಿಂದೂ ಸಂಘಟನೆಗಳು ಶಬರಿಮಲೆಗೆ ಆಗಮಿಸಿ ಯುವತಿಯರನ್ನು ತಡೆಯುವ ತಯಾರಿಕೆಯಲ್ಲೂ ತೊಡಗಿರುವುದಾಗಿಯೂ ಇದು ಭಾರೀ ಘರ್ಷಣೆ ಭುಗಿದೇಳಿಸುವಂತೆ ಮಾಡಲಿದೆ ಎಂದು ಗುಪ್ತಚರ ವಿಭಾಗ ಗೃಹಖಾತೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಕುಂಭಮಾಸ ಪೂಜೆ ವೇಳೆ ಶಬರಿಮಲೆ ದರ್ಶನ ನಡೆಸಲು ಮಂಗಳಮುಖಿಗಳು ಸೇರಿದಂತೆ ೩೭ ಯುವತಿಯರು ಈಗಾಗಲೇ ಸಂಬಂಧಪಟ್ಟ ವಿಭಾಗದಲ್ಲಿ ಹೆಸರು ನೋಂದಾಯಿಸಿದ್ದಾರೆ. ಶಬರಿಮಲೆ ಸಂದರ್ಶಿಸುವ ವೇಳೆ ತಮಗೆ ಅಗತ್ಯದ ಭದ್ರತೆ ಒದಗಿಸಬೇಂದೂ ಈ ೩೭ ಮಂದಿ ಪೊಲೀಸರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಇವರಿಗೆ ಭದ್ರತೆ ನೀಡುವ ವಿಷಯದಲ್ಲಿ ಪೊಲೀಸ್ ಇಲಾಖೆ ಯಾವುದೇ ಉತ್ತರ ನೀಡಿಲ್ಲ.

ಭದ್ರತೆಗಾಗಿ ಶಬರಿಮಲೆ ಮತ್ತು ಪರಿಸರ ಪ್ರದೇಶಗಳಲ್ಲಿ ೫೦೦೦ ಪೊಲೀಸರನ್ನು ನಿಯೋಜಿಸಲಾಗಿದೆ. ಮತ್ತೆ ಯುವತಿಯರು ಮಲೆಯೇರಿ ದ್ದಲ್ಲಿ ಘರ್ಷಣೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶಬರಿಮಲೆ ಮತ್ತು ಪರಿಸರ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜ್ಯಾರಿಗೊಳಿಸುವ ಸಾಧ್ಯತೆಯೂ ಇದೆ. ಯುವತಿಯರ ಪ್ರವೇಶವನ್ನು ತಡೆಗಟ್ಟುವುದು ಮಾತ್ರವಲ್ಲ, ಶಬರಿಮಲೆ ವಿಷಯz ಲ್ಲಿ ಯುವತಿಯರ ಪ್ರವೇಶಕ್ಕೆ ಅನುಕೂಲಕರ ನಿಲುವು ಮತ್ತು ಮರು ಪರಿಶೀಲನಾ ಅರ್ಜಿಗಳನ್ನು ಪರಿಶೀಲಿಸಬೇಕಾಗಿಲ್ಲ ಎಂಬ ದೇವಸ್ವಂ ಮಂಡಳಿಯ ಮತ್ತು ಸರಕಾರದ ನಿಲುವನ್ನು ಪ್ರತಿಭಟಿಸಿ ಅಯ್ಯಪ್ಪ ಕ್ರಿಯಾ ಸಮಿತಿಯಿಂ ದಲೂ ಶಬರಿಮಲೆ ಮತ್ತು ಪರಿಸರ ಪ್ರದೇಶಗಳಲ್ಲಿ ಭಾರೀ ಪ್ರತಿಭಟನೆಗಳು ಉಂಟಾಗುವ ಸಾಧ್ಯತೆ ಇದೆ. ಇದನ್ನೆಲ್ಲಾ ಪರಿಗಣಿಸಿ ನಿಲಯ್ಕಲ್  ನಿಂದಲೇ ಭಕ್ತರನ್ನು ನಿಯಂತ್ರಿಸುವ ಕ್ರಮ ಪೊಲೀಸ್ ಇಲಾಖೆ ಕೈಗೊಂಡಿದೆ.

NO COMMENTS

LEAVE A REPLY