ಕುಂಬ್ಡಾಜೆ ನಿವಾಸಿ ತಮಿಳುನಾಡಿನಲ್ಲಿ ವಾಹನ ಅಪಘಾತದಲ್ಲಿ ಮೃತ್ಯು

0
32

ಬದಿಯಡ್ಕ: ಕುಂಬ್ಡಾಜೆ ನಿವಾಸಿಯೊಬ್ಬರು ತಮಿಳುನಾಡಿನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟರು.

ಕುಂಬ್ಡಾಜೆ ಬಳಿಯ ಮಲ್ಲಾರ ನಿವಾಸಿ ಗೋಪಾಲಕೃಷ್ಣ(೬೫) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ತಮಿಳುನಾಡಿನ ಸೇಲಂನಲ್ಲಿರುವ ಕುಟುಂಬ ಸದಸ್ಯನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಇವರು ಸ್ನೇಹಿತ ರೊಂದಿಗೆ ಸೇಲಂಗೆ ತೆರಳಿದ್ದರು. ಶನಿವಾರ ಬೆಳಿಗ್ಗೆ ೧೧.೩೦ರ ವೇಳೆ ಸೇಲಂ-ಕಡಲೂರು ರಾಷ್ಟ್ರೀಯ ಹೆದ್ದಾರಿಯ ನೆನಾರ್ ಪಾಳಯಂ ಎಂಬಲ್ಲಿ ಕಾರು ನಿಲ್ಲಿಸಿ ಇವರು ರಸ್ತೆ ಬದಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬಂದ ಇನ್ನೋವಾ ಕಾರು ಗೋಪಾಲಕೃಷ್ಣರಿಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂ ಡ ಇವರನ್ನು ಚಿನ್ನ ಸೇಲಂನ ಸರಕಾರಿ ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.  ಮೂಲತಃ ತಮಿಳುನಾಡಿನ ಸೇಲಂ ನಿವಾಸಿಯಾದ ಗೋಪಾಲಕೃಷ್ಣ ೨೦ ವರ್ಷಗಳ ಹಿಂದೆ ಕುಂಬ್ಡಾಜೆಗೆ ಬಂದು ಈ ಪ್ರದೇಶದಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದರು. ಬಳಿಕ ಕುಂಬ್ಡಾಜೆ ಬಳಿಯ ಮಲ್ಲಾರ ಎಂಬಲ್ಲಿನ ಗೀತಾ ಎಂಬವರನ್ನು ಮದುವೆಯಾಗಿ ಇಲ್ಲೇ ಮನೆ ನಿರ್ಮಿಸಿ ವಾಸಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಇವರು ಗುಜರಿ ವ್ಯಾಪಾರ ನಿಲ್ಲಿಸಿ ಕಣ್ಣೂರಿನಲ್ಲಿ  ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಇವರಿಗೆ ಕುಟುಂಬ ಸದಸ್ಯನ ಮದುವೆ ಆಮಂತ್ರಣ ಲಭಿಸಿದೆ.  ಮದುವೆಯಲ್ಲಿ ಭಾಗವಹಿಸ ಲೆಂದು ಗೋಪಾಲಕೃಷ್ಣ ಕಣ್ಣೂರಿನಲ್ಲಿರುವ ತಮಿಳುನಾಡಿನ ಸ್ನೇಹಿತರೊಂದಿಗೆ ಸೇಲಂಗೆ ತೆರಳಿದ್ದು ಈ ವೇಳೆ ಅಪಘಾತ ಸಂಭವಿಸಿದೆ. ಮೃತದೇಹವನ್ನು ಸೇಲಂನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಮೃತರು ಪತ್ನಿ ಗೀತಾ, ಮಕ್ಕಳಾ ದ ವಿನೀತ್, ನಿಶ್ಮಿತ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY