ಲೋಕಸಭಾ ಚುನಾವಣೆ ಸಿಪಿಎಂ, ಸಿಪಿಐಗೆ ಸ್ವಂತ ಚಿಹ್ನೆಯಲ್ಲಿ ಸ್ಪರ್ಧಿಸಲಿರುವ ಕೊನೆಯ ಅವಕಾಶ: ಪಿ.ಎಸ್. ಶ್ರೀಧರನ್ ಪಿಳ್ಳೆ

0
27

 

ಕಾಸರಗೋಡು: ಸಿಪಿಎಂ ಹಾಗೂ ಸಿಪಿಐಗೆ ಸ್ವಂತ ಚಿಹ್ನೆಯಲ್ಲಿ ಸ್ಪರ್ಧಿಸಲಿ ರುವ ಕೊನೆಯ ಅವಕಾಶವಾಗಿದೆ ಈ ಲೋಕಸಭಾ ಚುನಾವಣೆ ಎಂಬು ದಾಗಿ ಬಿಜೆಪಿ  ರಾಜ್ಯಾಧ್ಯಕ್ಷ ಪಿ.ಎಸ್. ಶ್ರೀಧ ರನ್ ಪಿಳ್ಳೆ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಬಿಜೆಪಿ  ಸರಕಾರದ ಐದು ವರ್ಷದ ಸಾಧನೆಗಳನ್ನು ಜನತೆಗೆ ತಿಳಿಸಲು ಬಿಜೆಪಿ  ಹಮ್ಮಿಕೊಂಡ ‘ಮನ್‌ಕೀ ಬಾತ್ ಮೋದಿ ಕೆ ಸಾತ್’ ಎಂಬ ವೀಡಿಯೋ ಪ್ರಚಾರ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ಕಾಸರಗೋಡಿನಲ್ಲಿ ಧ್ವಜ ಹಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.  ಸಿಪಿಎಂ ಹಾಗೂ ಸಿಪಿಐ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾರೀ ಸೋಲನುಭವಿಸಲಿದ್ದು, ಇದರ ಪರಿಣಾಮವಾಗಿ ರಾಷ್ಟ್ರೀಯ  ಪಕ್ಷವೆಂಬ ಮಾನ್ಯತೆಯನ್ನೂ ಕಳೆದುಕೊಳ್ಳಲಿದೆ ಯೆಂದೂ ಅವರು ಅಭಿಪ್ರಾಯಪಟ್ಟಿ ದ್ದಾರೆ.  ೬೦ ವರ್ಷ ಕಾಲ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಸೇರಿ ಕೇಂದ್ರದಲ್ಲಿ ಆಡಳಿತ ನಡೆಸಿದರೂ ಅಭಿವೃದ್ಧಿ ಮಾತ್ರ ಶೂನ್ಯ ಎಂದೂ ಅವರು ಅಪಹಾಸ್ಯಗೈದರು. ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ನೇತಾರರಾದ ಬಾಲಕೃಷ್ಣ ಶೆಟ್ಟಿ, ಎಂ. ಸಂಜೀವ ಶೆಟ್ಟಿ, ಎ.ಕೆ. ಕಯ್ಯಾರ್, ಪುಷ್ಪ ಅಮೆಕ್ಕಳ, ಎ. ವೇಲಾಯುಧನ್, ಪಿ. ರ ಮೇಶ್, ಆರ್. ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

NO COMMENTS

LEAVE A REPLY