ಮಾವೋವಾದಿಗಳ ಬೇಟೆಗಾಗಿ ರಾಜ್ಯದಲ್ಲಿ ‘ಆಪರೇಷನ್ ಆನೆಕೊಂಡಾ’ ಕಾರ್ಯಾಚರಣೆ

0
29

ಕಾಸರಗೋಡು: ರಾಜ್ಯದಲ್ಲಿ ಮಾವೋವಾದಿ ಚಟುವಟಿಕೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾವೋವಾದಿಗಳ ವಿರುದ್ಧ ಕೇರಳ ಪೊಲೀಸರು ಆಪರೇಶನ್ ಆನೆಕೊಂಡಾ ಎಂಬ ಹೊಸ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.

ನಕ್ಸಲ್ ನಿಗ್ರಹಪಡೆಯ ತಂಡರ್ ಬೋಲ್ಟ್ ಕಮಾಂಡೋ ಪಡೆ, ಆಂಟಿ ನಕ್ಸಲ್ ಸ್ಕ್ವಾಡ್ ಮತ್ತು ಸ್ಥಳೀಯ ಪೊಲೀಸರ ಸಹಾಯದೊಂದಿಗೆ ವಿಶೇಷ ಹಾಗೂ ತಜ್ಞ ರೀತಿಯ ತರಬೇತಿ ಪಡೆಯನ್ನು ಒಳಪಡಿಸಿ ಆಪರೇಶನ್ ಆನೆಕಾಂಡಾ ಕಾರ್ಯಾಚರಣೆ ನಡೆಸಲಾ ಗುತ್ತಿದೆ. ವಯನಾಡಿನ ವ್ಯತಿರಿಯ ಉಪವನಿ ಎಂಬ ಹೆಸರಿನ ಖಾಸಗಿ ರಿಸೋರ್ಟ್‌ನಲ್ಲಿ ಮೊನ್ನೆ ರಾತ್ರಿ ಮಾವೋವಾದಿಗಳ ವಿರುದ್ಧ ಆಪರೇಶನ್ ಆನೆಕೊಂಡಾ ತಂಡವೇ ಕಾರ್ಯಾಚರಣೆಗಿಳಿದಿತ್ತು. ಆ ಕಾರ್ಯಾಚರಣೆಯಲ್ಲಿ ಮಾವೋವಾದಿಯ ಕಬನಿ ದಳಕ್ಕೆ ಸೇರಿದ ನೇತಾರ ಸಿ.ಪಿ. ಜಲೀಲ್ (೨೬) ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದನು. ಇವರಲ್ಲಿ ಓರ್ವ ಗಾಯಗೊಂಡಿದ್ದನು.

ಇದೇ ವೇಳೆ ಮಾವೋವಾದಿ ಗಳು ಮೊದಲು ತಮ್ಮ ಮೇಲೆ ಗುಂಡು ಚಲಾಯಿಸಿದರೆಂದೂ ಸ್ವಯಂ ರಕ್ಷಣೆಗಾಗಿ ತಾವು ಮಾವೋವಾದಿಗಳ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾವೋವಾದಿಗಳ ಇಬ್ಬರು ಸದಸ್ಯರು ಮೊನ್ನೆ ರಾತ್ರಿ ೯.೩೦ಕ್ಕೆ ತಮ್ಮ ರಿಸೋರ್ಟ್‌ಗೆ ಬಂದು ೫೦೦೦೦ ರೂ. ನೀಡಬೇಕೆಂದು ಕೇಳಿಕೊಂಡಿದ್ದರೆಂದೂ, ಆಗ ಅಷ್ಟೊಂದು ಹಣ ತಮ್ಮ ಕೈಯಲಿಲ್ಲ, ೫೦೦೦ ರೂ. ನೀಡುವುದಾಗಿ ತಾವು ಅವರಲ್ಲಿ ತಿಳಿಸಿದೆ ಎಂದು ಮಾವೋವಾದಿಗಳಿಬ್ಬರು ನಮ್ಮಲ್ಲಿ ಸರಳ ಹಾಗೂ ಸಜ್ಜನಿಕೆ ರೀತಿಯಲ್ಲಿ ವರ್ತಿಸಿದ್ದರೆಂದು ರಿಸೋರ್ಟ್‌ನ ಮೆನೇಜರ್ ತಿಳಿಸಿದ್ದಾರೆ. ನಾವು ಪೊಲೀಸರನ್ನೂ ಕರೆದಿರಲಿಲ್ಲ. ಆದರೆ ಪೊಲೀಸರು ಇಲ್ಲಿಗೆ ಆಗಮಿಸಿದ ಹಿನ್ನೆಲೆ ಬಗ್ಗೆ ತಿಳಿದಿಲ್ಲವೆಂದೂ ರಿಸೋರ್ಟ್‌ನ ಇತರ ಸಿಬ್ಬಂದಿಗಳೂ ಸುದ್ದಿಗಾರರಲ್ಲಿ ತಿಳಿಸಿದ್ದಾರೆ.

ಗುಂಡು ಹಾರಾಟದಲ್ಲಿ ಸಾವನ್ನಪ್ಪಿದ ಮಾವೋವಾದಿ ಜಲೀಲ್‌ನ ತಲೆಯ ಹಿಂದಿನ ಭಾಗದಿಂದ ಆತನಿಗೆ ಗುಂಡು ತಗಲಿದೆ. ಮೂರು ಗುಂಡು ಆತನ ದೇಹ ಪ್ರವೇಶಿಸಿದೆ. ಅದರಲ್ಲಿ ಒಂದು ಗುಂಡು ಆತನ ತಲೆಯ ಹಿಂಭಾಗ ದಿಂದ ಪ್ರವೇಶಿಸಿ ಹಣೆಯನ್ನು ಸೀಳಿ ಹೊರ ಬಂದಿತ್ತೆಂದು ಮೃತದೇಹದ ಮಹಜರು ಪರೀಕ್ಷೆಯಲ್ಲಿ ತಿಳಿಸಲಾಗಿದೆ. ತನ್ನ ಸಹೋದರ ಸಾವಿನ ಬಗ್ಗೆ  ಸಮಗ್ರ ತನಿಖೆ ನಡೆಸಬೇಕೆಂದು ಮೃತ ಜಲೀಲ್‌ನ ಸಹೋದರ ಸಿ.ಪಿ.ರಶೀದ್ ಇದೇ ಸಂದರ್ಭದಲ್ಲಿ ಆಗ್ರಹ ಪಟ್ಟಿದ್ದಾರೆ.ಮಾತ್ರವಲ್ಲದೆ ಪೊಲೀಸರು ಒಂದು ನಕಲಿ ಎನ್‌ಕೌಂಟರ್ ಆಗಿದೆ ಎಂದೂ ಅವರು ಆರೋಪಿಸಿದ್ದಾರೆ. ಮಾವೋವಾದಿ ನೇತಾರನ ಹತ್ಯೆ ಹಿನ್ನೆಲೆಯಲ್ಲಿ ವಯನಾಡು ಜಿಲ್ಲೆ ಸೇರಿದಂತೆ ಉತ್ತರ ಕೇರಳದ ಹಲವು ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಬಿಗು ಜಾಗೃತಾ ನಿರ್ದೇಶ ನೀಡಿದೆ.

NO COMMENTS

LEAVE A REPLY