ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಬ್ರಹ್ಮಕಲಶೋತ್ಸವ: ವಿಗ್ರಹ ಮೆರವಣಿಗೆಯೊಂದಿಗೆ ಚಾಲನೆ

0
62

ಕಾಸರಗೋಡು: ನಗರದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಕಡಪ್ಪುರ ಶ್ರೀ ಕುರುಂಬಾ ಭಗವತೀ ದೇವಸ್ಥಾನದಿಂದ ಗಣಪತಿ, ಸುಬ್ರಹ್ಮಣ್ಯ ದೇವರ ವಿಗ್ರಹ ಮೆರವಣಿಗೆ ನಡೆಯಿತು.

ಸಂಜೆ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಆಗಮನ, ವಿವಿಧ ವೈದಿಕ ಕಾರ್ಯಕ್ರಮಗಳು ಆರಂಭಗೊ ಳ್ಳಲಿದೆ. ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಜೆ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸುವರು. ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಅನಂತಕಾಮತ್ ಅಧ್ಯಕ್ಷತೆ ವಹಿಸುವರು. ಶ್ಯಾಮ ಭಟ್ ಬೆಂಗಳೂರು, ಹಿರಣ್ಯ ವೆಂಕಟೇಶ್ವರ ಭಟ್ ಬಾಯಾರು ಭಾಗವಹಿಸುವರು. ಈ ವೇಳೆ ಬೆದ್ರಡ್ಕ ರಮೇಶ್ ಕಾರಂತ, ಅಣ್ಣಪ್ಪ ಕಾರ್ಕಳ, ಉದಯ ಆಚಾರಿ, ಕ್ಷೇತ್ರದ ಮಾಜಿ ಪ್ರಧಾನ ಅರ್ಚಕ ರಾಧಾಕೃಷ್ಣ ಅಡಿಗ ಅವರನ್ನು ಗೌರವಿಸಲಾಗುವುದು. ಎಕ್ಸಿಕ್ಯೂಟಿವ್ ಆಫೀಸರ್ ಎಂ. ಬಾಬು, ಉದ್ಯಮಿ ಗಿರಿಧರ ಕಾಮತ್, ಕೆ.ಜಿ. ಗೌರಿಶಂಕರ್, ಡಾ| ಶ್ರೀಧರ್ ರಾವ್, ಡಾ|ಕೃಷ್ಣ ಭಟ್, ಸದಾನಂದ ರೈ, ಲಕ್ಷ್ಮೀಪತಿ ರಾವ್, ಡಾ| ಸುರೇಶ್ ಬಾಬು, ರವೀಂದ್ರ ಕರಂದಕ್ಕಾಡು, ಸಂಧ್ಯಾ ವಿ. ಶೆಟ್ಟಿ, ಜಾಹ್ನವಿ, ಮುರಳೀಧರನ್, ವಿಜಯ ಕುಮಾರ್ ಶೆಟ್ಟಿ, ದೇವದಾಸ್ ನುಳ್ಳಿಪ್ಪಾಡಿ ಉಪಸ್ಥಿತರಿರುವರು. ರಾತ್ರಿ ೮.೩೦ಕ್ಕೆ ಕಲೈಮಣಿ ಶ್ರೀ ವೀರಮಣಿ ರಾಜು ಮತ್ತು ಅಭಿಷೇಕ ರಾಜು ಬಳಗ ಚೆನ್ನೈ ಇವರಿಂದ ಭಕ್ತಿಗಾನ ಮೇಳ ನಡೆಯಲಿದೆ. ನಿನ್ನೆ ಸಂಜೆ ಕೇಳುಗುಡ್ಡೆ ಶ್ರೀ ಅಯ್ಯಪ್ಪ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ನಡೆಯಿತು. ಅರ್ಚಕ ಶ್ರೀ ಸತ್ಯನಾರಾಯಣ ಅಡಿಗ ಪ್ರಾರ್ಥನೆಗೆ ನೇತೃತ್ವ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಅನಂತ ಕಾಮತ್, ಕಾರ್ಯದರ್ಶಿ ಮುರಳಿಧರನ್, ಬ್ರಹ್ಮಕಲಶೋತ್ಸವ ಸಮಿತಿ  ಅಧ್ಯಕ್ಷ ಸಿ.ವಿ. ಪೊದುವಾಳ್, ಜಗನ್ನಾಥ ಮೈತ್ರೇಯಿ ಗುರುಕುಲ, ವೆಂಕಟ್ರಮಣ ಹೊಳ್ಳ, ರಾಮಪ್ರಸಾದ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕಮಲಾಕ್ಷ, ಸವಿತ ಟೀಚರ್, ಮೀರಾ ಕಾಮತ್, ಸಂಧ್ಯಾ ವಿ. ಶೆಟ್ಟಿ ನೇತೃತ್ವ ನೀಡಿದರು.

NO COMMENTS

LEAVE A REPLY