ಲೋಕಸಭಾ ಚುನಾವಣೆಯೊಂದಿಗೆ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಇಲ್ಲ

0
39

ಮಂಜೇಶ್ವರ: ಮಂಜೇಶ್ವರ ವಿಧಾನಸಭೆಗೆ ಲೋಕಸಭಾ ಚುನಾವಣೆ ಜತೆಗೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ನಿನ್ನೆ ಪ್ರಕಟಿಸಿದ್ದು, ಅದರಲ್ಲಿ ಮಂಜೇಶ್ವರ ವಿಧಾನಸಭೆಗೆ ಉಪಚುನಾವಣೆಗೆ ಸಂಬಂಧಿಸಿ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದಾಗಿ ಲೋಕಸಭಾ ಚುನಾವಣೆ ಜತೆ ಮಂಜೇಶ್ವರ ವಿಧಾನಸಭೆಗೆ ಉಪಚುನಾವಣೆ ನಡೆಯದು ಎಂಬುವುದು ಸ್ಪಷ್ಟಗೊಂಡಂತಾಗಿದೆ.  ಮಂಜೇಶ್ವರ ಕ್ಷೇತ್ರದ ಚುನಾವಣಾ ತಕರಾರು ಅರ್ಜಿ ಹಿಂತೆಗೆದುಕೊಳ್ಳಲು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಉಮೇದ್ವಾರ ಕೆ. ಸುರೇಂದ್ರನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ವಿಷಯದಲ್ಲಿ ಹೈಕೋರ್ಟ್‌ನ ತೀರ್ಪು ಇನ್ನಷ್ಟೇ ಹೊರ ಬರಲು ಬಾಕಿ ಇದೆ. ಆ ಬಳಿಕವಷ್ಟೇ ಮಂಜೇಶ್ವರ ವಿಧಾನಸಭೆಗೆ ಉಪಚುನಾವಣೆ ನಡೆಯುವ ವಿಷಯದಲ್ಲಿ ಚುನಾವಣಾ ಆಯೋಗ ಯಾವುದೇ ತೀರ್ಮಾನ ಕೈಗೊಳ್ಳಲಿದೆ. ಅದರಿಂದಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ಲೋಕಸಭಾ ಚುನಾವಣೆ ಬಳಿಕವಷ್ಟೇ ನಡೆಯಲಿದೆ ಎಂಬುವುದು ಸ್ಪಷ್ಟಗೊಂಡಂತಾಗಿದೆ.

NO COMMENTS

LEAVE A REPLY