ಕಣ್ಣೂರಿನಿಂದ ೨ ಕಿಲೋ, ಮಂಗಳೂರಿನಿಂದ ೮೨೦.೯೫ ಗ್ರಾಂ ಚಿನ್ನ ವಶ; ಮೂವರು ಕಸ್ಟಡಿಗೆ

0
73

ಕಾಸರಗೋಡು: ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಸಿಸ್ಟೆಂಟ್ ಕಮಿಷನರ್ ಒ.ಪ್ರದೀಪ್‌ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯ ಲ್ಲಿ ಎರಡು ಕಿಲೋ ಚಿನ್ನ ವಶಪಡಿಸಿಕೊಂಡಿದೆ. ಈ ಸಂಬಂಧ ಕಾಸರಗೋಡು ಉಪ್ಪಳ ನಿವಾಸಿ ಮೊಹಮ್ಮದ್ ಹಾರೀಸ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆತ ಶಾರ್ಜಾದಿಂದ ವಿಮಾನದಲ್ಲಿ ಕಣ್ಣೂರಿನಲ್ಲಿ ಬಂದಿಳಿದಿದ್ದನು. ಕಸ್ಟಮ್ಸ್ ತಂಡ ಆತನ ಬ್ಯಾಗ್‌ಗಳನ್ನು ತಪಾಸಣೆಗೊಳ ಪಡಿಸಿದಾಗ ಅದರಲ್ಲಿ ಚಿನ್ನ ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಿದ್ದಾರೆ. ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಲ್ಲಿನ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ೨೬.೯೨ ಲಕ್ಷ ರೂ. ಮೌಲ್ಯದ ೮೨೦.೯೫ ಗ್ರಾಂ ಚಿನ್ನ ಪತ್ತೆಹಚ್ಚಿದೆ. ಈ ಸಂಬಂಧ ಕಾಸರಗೋಡಿನ ಮಶ್ಕೂರ್(೨೧) ಮತ್ತು ಮೊಹಮ್ಮದ್ ಇರ್ಷಾದ್ (೨೧) ಎಂಬವರನ್ನು ಕಸ್ಟಮ್ಸ್ ತಂಡ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಮಶರ್‌ನಿಂದ ೧೫.೯೨ ಲಕ್ಷ ರೂ. ಮೌಲ್ಯದ ೪೮೫.೪೮೦ ಗ್ರಾಂ ಮತ್ತು ಮೊಹಮ್ಮದ್ ಇರ್ಷಾದ್ ನಿಂದ ೧೧ ಲಕ್ಷ ರೂ. ಮೌಲ್ಯದ ೩೩೫.೪೭೦ ಗ್ರಾಂ ಚಿನ್ನ ಕಸ್ಟಮ್ಸ್ ತಂಡ ವಶಪಡಿಸಿದೆ. ಇವರು ಮೊನ್ನೆ ಬೆಳಿಗ್ಗೆ ದುಬಾಯಿಂದ ವಿಮಾನದಲ್ಲಿ ಮಂಗಳೂರಿನಲ್ಲಿ ಇಳಿದಿದ್ದರು. ಚಿನ್ನವನ್ನು ಪೇಸ್ಟ್ ರೂಪದಲ್ಲಾಗಿಸಿ ಪ್ಲಾಸ್ಟಿಕ್ ಕವರಿನಲ್ಲಿ ಮುಚ್ಚಿ ಅದಕ್ಕೆ ಸೆಲ್ಲೋ ಚೇಪ್ ಅಂಟಿಸಿದ  ಕಾಂಡೋಮ್‌ನಲ್ಲಿ ತುಂಬಿಸಿದ ಬಳಿಕ ಅದನ್ನು ಗುದದ್ವಾರದೊಳ ಗಿಟ್ಟು  ತರಲಾಗಿತ್ತೆಂದು ಕಸ್ಟಮ್ಸ್ ತಂಡ ತಿಳಿಸಿದೆ.

ಮಶ್ಕೂರ್‌ನ ದೇಹದಿಂದ ಈ ರೀತಿಯ ನಾಲ್ಕು ಪ್ಯಾಕೆಟ್‌ಗಳು ಮತ್ತು ಇರ್ಷಾದ್‌ನ ದೇಹದಿಂದ  ಮೂರು ಪ್ಯಾಕೆಟ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಕಸ್ಟಮ್ಸ್ ತಂಡ ತಿಳಿಸಿದೆ. ಇದೇ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ಕಳೆದ ಮೂರು ದಿನಗಳಲ್ಲಿ ನಡೆಸಿದ  ಕಾರ್ಯಾಚರಣೆಯಲ್ಲಿ ಒಟ್ಟು ಒಂದು ಕೋಟಿ ರೂ.ಗಳ ಅಕ್ರಮ ಚಿನ್ನಪತ್ತೆ ಹಚ್ಚಿ ವಶಪಡಿಸಿದೆ. ಕಾಸರಗೋಡು ಮತ್ತು ಕಲ್ಲಿಕೋಟೆ ಯಲ್ಲಿ ಚಿನ್ನ ಕಳ್ಳ ಸಾಗಾಟದಾರರ ಸೂತ್ರಧಾರಿಕೆಯಲ್ಲಿ ಈ ಕಳ್ಳ ಸಾಗಾಟ ನಡೆಯುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY