ನಗರದಲ್ಲಿ ಬೀದಿ ನಾಯಿಗಳು: ವಿದ್ಯಾರ್ಥಿ ಸಹಿತ ಇಬ್ಬರಿಗೆ ಕಡಿತ

0
39

ಕಾಸರಗೋಡು: ನಗರ ಹಾಗೂ ಪರಿಸರ ಪ್ರದೇಶಗಳಲ್ಲಿ ಬೀದಿನಾಯಿ ಗಳ ಹಾವಳಿ ತೀವ್ರಗೊಂಡಿದೆ. ವಿದ್ಯಾರ್ಥಿ ಸಹಿತ ಇಬ್ಬರಿಗೆ ಕಡಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ನಿನ್ನೆ ರಾತ್ರಿ  ಹಳೆ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ನಿಂತಿದ್ದ ಮೊಗ್ರಾಲ್ ಪುತ್ತೂರಿನ ಸುಲೈಮಾನ್(೪೫) ಎಂಬವರಿಗೆ ಬೀದಿನಾಯಿ ಕಚ್ಚಿ ಗಾಯಗೊಳಿಸಿದೆ. ಪಿಲಿಕುಂಜೆ ನಿವಾಸಿಯಾದ ೬ನೇ ತರಗತಿ ವಿದ್ಯಾರ್ಥಿಗೂ ಮೊನ್ನೆ ನಾಯಿ ಕಚ್ಚಿರುವುದಾಗಿ ಹೇಳಲಾಗುತ್ತಿದೆ. ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿರುವುದು ಜನತೆಗೆ ಭೀತಿ ಹುಟ್ಟಿಸಿದೆ.

NO COMMENTS

LEAVE A REPLY