ಮರದ ಗಿರಣಿ ಬಳಿ ಬೆಂಕಿ: ಭಾರೀ ನಷ್ಟ

0
30

ಕಾಸರಗೋಡು: ಕೂಡ್ಲು ಪಾರೆಕಟ್ಟೆಯಲ್ಲಿರುವ ಹೋನಸ್ಟಿ ಟಿಂಬರ್ ಎಂಬ ಹೆಸರಿನ ಮರದ ಗಿರಣಿ ಪಕ್ಕ ನಿನ್ನೆ ಬೆಂಕಿ ತಗಲಿ,  ಪ್ರಮಾಣದ ಮರದ ದಿಮ್ಮಿಗಳು ಬೆಂಕಿಗಾಹು ತಿಯಾಗಿದೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಅಂದಾಜಿಸಲಾಗಿದೆ.

ಅಲ್ಲೇ ಪಕ್ಕದಲ್ಲಿರುವ ಮರದ ಕಂಬ ಹೊಂದಿರುವ ವಿದ್ಯುತ್ ಲೈನ್‌ನಿಂದ ವಿದ್ಯುತ್ ತಂತಿ ಘರ್ಷಣೆ ಉಂಟಾಗಿ ಅದರಿಂದ ಎದ್ದ ಬೆಂಕಿ ಕಿಡಿಗಳು ಹುಲ್ಲಿಗೆ ಬಿದ್ದಿರುವುದೇ ಬೆಂಕಿ ತಗಲಲು ಕಾರಣವೆನ್ನಲಾಗಿದೆ.   ಕಾಸರಗೋಡು ಅಗ್ನಿ ಶಾಮಕದಳದ ಲೀಡಿಂಗ್ ಫಯರ್ ಮೇನ್ ಸಲೀಂ ಕುಮಾರ್ ಎಸ್.ಕೆ.ರ ನೇತೃತ್ವದಲ್ಲಿ  ಬೆಂಕಿ ನಂದಿಸಿದರು. ಆ ಮೂಲಕ ಬೆಂಕಿ ಮರದ ಗಿರಣಿಯೊಳಗೆ ವ್ಯಾಪಿಸುವುದನ್ನು ತಡೆಗಟ್ಟುವ ಮೂಲಕ ಸಂಭಾವ್ಯ ಭಾರೀ ಅನಾಹುತವನ್ನು ಅಗ್ನಿಶಾಮಕ ತಪ್ಪಿಸಿದೆ.

NO COMMENTS

LEAVE A REPLY