ರಾಹುಲ್ ಗಾಂಧಿ ನಾಳೆ ಪೆರಿಯದಲ್ಲಿ: ಎಲ್ಲೆಡೆ ಪೊಲೀಸ್ ಬಂದೋಬಸ್ತ್

0
47

ಕಾಸರಗೋಡು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಳೆ ಪೆರಿಯಕ್ಕೆ ಆಗಮಿಸಲಿದ್ದಾರೆ. ಪೆರಿಯ ಕಲ್ಯೋಟ್‌ನಲ್ಲಿ ಇತ್ತೀಚೆಗೆ ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್‌ಲಾಲ್‌ರ ಕುಟುಂಬಗಳನ್ನು ಭೇಟಿಯಾಗ ಲಿದ್ದಾರೆ.

ನಾಳೆ ಮಧ್ಯಾಹ್ನ ೧.೩೦ರ ವೇಳೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪುವ ಅವರು ಬಳಿಕ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯ ಬಳಿಯ ಹೆಲಿಪ್ಯಾಡ್‌ನಲ್ಲಿ ಬಂದಿಳಿಯುವರು.  ಅನಂತರ ಕಾರು ಮೂಲಕ ಪೆರಿಯ ಕಲ್ಯೋಟ್‌ಗೆ  ತೆರಳಲಿದ್ದಾರೆ. ಮೊದಲು ಕೃಪೇಶ್‌ರ ಮನೆಗೆ ಬಳಿಕ ಶರತ್‌ಲಾಲ್‌ರ ಮನೆಗೆ ಭೇಟಿಯಾಗಿ  ಕುಟುಂಬ ಗಳೊಂದಿಗೆ ಮಾತನಾಡ ಲಿದ್ದಾರೆ. ಈ ಎರಡು ಮನೆಗಳಲ್ಲಿ ರಾಹುಲ್ ಗಾಂಧಿ ತಲಾ ಅರ್ಧರ್ಧ ಗಂಟೆ ತಂಗುವರೆಂದು ತಿಳಿದು ಬಂದಿದೆ. ಬಳಿಕ ಪೆರಿಯದಿಂದ ಹೆಲಿ ಕಾಪ್ಟರ್‌ನಲ್ಲಿ ಮರಳುವ ಅವರು ಮಟ್ಟನ್ನೂರಿನಲ್ಲಿ  ಕೊಲೆಗೀಡಾದ ಯೂತ್ ಕಾಂಗ್ರೆಸ್ ಕಾರ್ಯಕರ್ತ ಶುಹೈಬ್‌ರ ಮನೆಗೆ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿಯ ಪೆರಿಯ ಸಂದರ್ಶನ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿ ಲಾಗಿದೆ. ಎಸ್.ಪಿ. ಜಿ ತಂಡ ನಿನ್ನೆ ಪೆರಿಯ, ಕಲ್ಯೋಟ್  ತಲುಪಿದ್ದು ಭದ್ರತಾ ಕ್ರಮಗಳ ಕುರಿತು ಅವಲೋಕನ  ನಡೆಸಿದೆ. ರಾಹುಲ್ ಗಾಂಧಿಯವರ ವಾಹನ ಹಾದುಹೋಗುವ ರಸ್ತೆ, ಶರತ್‌ಲಾಲ್, ಕೃಪೇಶ್‌ರ ಮನೆ ಹಾಗೂ ಪರಿಸರ ಪ್ರದೇಶಗಳು ಪೂರ್ಣ ಎಸ್‌ಪಿಜಿ ತಂಡ ನಿಗಾದಲ್ಲಿರುವುದು. ಇಂದು ಅಪರಾಹ್ನ ಪೆರಿಯದಲ್ಲಿ ಹೆಲಿಕಾಪ್ಟರ್ ಮೂಲಕ ಭದ್ರತಾ ಕ್ರಮಗಳನ್ನು ಅವಲೋಕಿಸಲಿದ್ದಾರೆ.

ಎರಡು ದಿನಗಳ ಸಂದರ್ಶನದ ಅಂಗವಾಗಿ ರಾಹುಲ್ ಗಾಂಧಿ ಇಂದು ರಾಜ್ಯಕ್ಕೆ ಆಗಮಿಸುವರು.

NO COMMENTS

LEAVE A REPLY