ದಂಪತಿಗೆ ಹಲ್ಲೆ: ನಾಲ್ಕು ಮಂದಿ ವಿರುದ್ಧ ಕೇಸು

0
43

ಮಂಜೇಶ್ವರ: ಮನೆಗೆ ನುಗ್ಗಿ ದಂಪತಿಗೆ ಹಲ್ಲೆಗೈದ ಆರೋಪದಂತೆ ನಾಲ್ಕು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ವರ್ಕಾಡಿ ತಚ್ಚಿಲಪದವು ನಿವಾಸಿ ಮುನೀರ್ ಎಂಬವರ ಪತ್ನಿ ಸಜಿನ(೨೨) ನೀಡಿದ ದೂರಿನಂತೆ ಶಾಜಿ, ಮಿನಿ, ಶೈಜು, ಶೈಜನ್ ಎಂಬವರ ವಿರುದ್ಧ ಕೇಸು ದಾಖಲಿಸ ಲಾಗಿದೆ. ಈ ತಿಂಗಳ ೧೧ರಂದು ರಾತ್ರಿ ೭ ಗಂಟೆಗೆ ಮನೆಗೆ ನುಗ್ಗಿ ತನಗೆ ಹಾಗೂ ಪತಿಗೆ ತಂಡ ಹಲ್ಲೆಗೈದಿ ರುವುದಾಗಿ ಸಜಿನ ಆರೋಪಿಸಿದ್ದಾರೆ.

NO COMMENTS

LEAVE A REPLY