ಪೋಕ್ಸೋ ಪ್ರಕರಣ: ಆರೋಪಿಗೆ ಐದೂವರೆ ವರ್ಷ ಕಠಿಣ ಸಜೆ, ಜುಲ್ಮಾನೆ

0
45

ಕಾಸರಗೋಡು: ಏಳು ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ) ಪೋಕ್ಸೋ ಕಾನೂನಿನ ಒಂದು ಸೆಕ್ಷನ್‌ನಲ್ಲಿ ಐದು ವರ್ಷ ಕಠಿಣ ಸಜೆ, ೧೫೦೦೦ ರೂ. ಜುಲ್ಮಾನೆ ಮತ್ತು ಇನ್ನೊಂದು ಸೆಕ್ಷನ್‌ನಲ್ಲಿ ಆರು ತಿಂಗಳ ಕಠಿಣ ಸಜೆ, ೫೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಚಂದೇರಾ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಕರಿಮಣಲ್ ಪಾರಾ, ಕಾಕ್ಕರತೆಟ್ಟಿಕುಂಡ್ ಪುದಿಯ ವೀಟಿಲ್‌ನ ರಾಜೀವನ್ ಪಿ.ವಿ.(೪೫) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿ ದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ೬ ತಿಂಗಳು ಎರಡು ವಾರ ಹೆಚ್ಚುವರಿಯಾಗಿ ಸಜೆ ಅನುಭವಿಸಬೇಕಾಗಿದೆ. ಜುಲ್ಮಾನೆ ಪಾವತಿಸಿದ್ದಲ್ಲಿ  ಆ ಮೊತ್ತವನ್ನು ಬಾಲಕಿಗೆ ನೀಡಬೇಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೧೬ ಎಪ್ರಿಲ್ ೧೦ರಂದು ಚಂದೇರಾ ಪೊಲೀಸ್ ಠಾಣೆಗೊಳಪಟ್ಟ ಏಳು ವರ್ಷ ಪ್ರಾಯದ ಬಾಲಕಿಗೆ ಕ್ವಾರ್ಟರ್ಸ್‌ವೊಂದರಲ್ಲಿ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ದೂರಿನಂತೆ ಚಂದೇರಾ ಪೊಲೀಸರು ರಾಜೀವನ್‌ನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿ ಕ್ಯೂಷನ್ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಪಿ.ಆರ್. ಪ್ರಕಾಶ್ ಅಮ್ಮಣ್ಣಾಯ  ವಾದಿಸಿದ್ದರು.

NO COMMENTS

LEAVE A REPLY