ಬೈಕ್‌ಗೆ ಕಾರು ಢಿಕ್ಕಿ: ಸವಾರ ಆಸ್ಪತ್ರೆಗೆ

0
56

ಪೈವಳಿಕೆ: ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಗಾಯ ಗೊಂಡ ಘಟನೆ ಪೈವಳಿಕೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಪೈವಳಿಕೆ ಪೇಟೆಯ ದೂರವಾಣಿ ಕಚೇರಿ ಬಳಿಯಲ್ಲಿ ಬಾಯಾರು ಭಾಗಕ್ಕೆ ತೆರಳುತ್ತಿದ್ದ ಆಚೆಕರೆ ನಿವಾಸಿ ಅಬ್ಬಾಸ್‌ರ ಪುತ್ರ ಮನ್ನಾನ್ (೨೩) ಸಂಚರಿಸುತ್ತಿದ್ದ ಬೈಕ್‌ಗೆ ಎದುರು ಭಾಗದಿಂದ ಬಂದ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿ ಸಿದೆ. ಗಾಯಾಳುವನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರು ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ವಿರುದ್ಧ ದಿಕ್ಕಿ ನಲ್ಲಿ ಸಂಚರಿಸಿದ್ದೇ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ.

NO COMMENTS

LEAVE A REPLY