ಮನೆ ಟೆರೆಸ್‌ನಿಂದ ಬಿದ್ದು ಬಾಲಕ ಮೃತ್ಯು

0
46

ಕಾಸರಗೋಡು: ಮನೆ ಟೆರೆಸ್ ಮೇಲಿನಿಂದ  ಬಿದ್ದು ಬಾಲಕ ದಾರು ಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಹೊಸದುರ್ಗ ಇಕ್ಬಾಲ್ ಹೈಯರ್ ಸೆಕೆಂಡರಿ ಶಾಲೆ ಬಳಿ ವಾಸಿಸುತ್ತಿರುವ ಹೊಸದುರ್ಗ ಹಳೇ ಕಡಪುರ ನಿವಾಸಿ ಅಹಮ್ಮದ್- ಮಾಷಿತ ದಂಪತಿ ಪುತ್ರ ಹೊಸದುರ್ಗ ಚಿನ್ಮಯ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಮಿಗ್ದಾದ್ (೯) ಸಾವನ್ನಪ್ಪಿದ ಬಾಲಕ. ನಿನ್ನೆ ಅಪರಾಹ್ನ ಈ ಘಟನೆ ನಡೆದಿದೆ. ಆಟದ ವೇಳೆ ಮನೆ ಟೆರೆಸ್ ಮೇಲೆ ಬಿದ್ದ ಚೆಂಡನ್ನು ತೆಗೆ ಯಲೆಂದು ಬಾಲಕ ಮೇಲೆ ಹತ್ತಿ ದ್ದನು. ಆಗ ಅಕಸ್ಮಾತಾಗಿ ಜಾರಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿ ದ್ದನು. ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿ ಸಿದರೂ ಪ್ರಾಣ ಉಳಿಸಲು ಸಾಧ್ಯ ವಾಗಲಿಲ್ಲ. ಮೃತನು ಹೆತ್ತವರ ಹೊರ ತಾಗಿ ಸಹೋದರ ಮುಹಮ್ಮದ್ ಮಿಸಾಕ್‌ನನ್ನು ಅಗಲಿದ್ದಾನೆ.

NO COMMENTS

LEAVE A REPLY