ಇಂದು ಮುಂಜಾನೆ ನಡೆದ ದಾರುಣ ಘಟನೆ: ಕಾರು-ಜೀಪು ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃತ್ಯು

0
57

ಕಾಸರಗೋಡು: ಕಾರು-ಜೀಪು ಮುಖಾಮುಖಿಯಾಗಿ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟು,  ಮೂರು ಮಂದಿ ಗಾಯಗೊಂಡ ಘಟನೆ ಚಳಿಯಂಗೋಡು ಕೋಟ್ಟರಿವಂ ಜಂಕ್ಷನ್ ಬಳಿ ಇಂದು ಮುಂಜಾನೆ ನಡೆದಿದೆ. ಬಂದ್ಯೋಡು ಬಳಿಯ ಪಚ್ಚಂಬಳ ನಿವಾಸಿ, ಬೆಂಗಳೂರಿನ ಕಾಲೇಜೊಂದರ ವಿದ್ಯಾರ್ಥಿ ಮೊಹಮ್ಮದ್ ಮಸೂದ್(೨೨) ಮೃತಪಟ್ಟವರು. ಇವರು ತಿಂಗಳ ಹಿಂದೆ ರಜೆಯಲ್ಲಿ ಮನೆಗೆ ತಲುಪಿದ್ದು ಎರಡು ದಿನದ ಹಿಂದೆ ಸ್ನೇಹಿತರ ಜೊತೆ ವಯನಾಡಿಗೆ ಪ್ರವಾಸಕ್ಕಾಗಿ ತೆರಳಿದ್ದರು. ಜೊತೆಗಿದ್ದ ಮಂಗಳೂರು ಕಾಲೇಜಿನ ವಿದ್ಯಾರ್ಥಿಗಳಾದ ಅಬ್ದುಲ್ ಸಮದ್ ಉಪ್ಪಳ ಗೇಟ್, ಆಶಿಕ್ ವಾಮಂಜೂರು ಚೆಕ್‌ಪೋಸ್ಟ್, ಸಜ್ಜಾದ್ ಪೆರಿಂ ಗಡಿಯವರೂ ಗಾಯಗೊಂಡಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ನೇಹಿತನ ಕಾರಿನಲ್ಲಿ ಗೆಳೆಯರ ಜೊತೆ ವಯನಾಡಿಗೆ ತೆರಳಿ ಹಿಂತಿರುಗುವ ಮಧ್ಯೆ ಇಂದು ಮುಂಜಾನೆ ಅಪಘಾತ ಸಂಭವಿಸಿದ್ದು, ಮೃತಪಟ್ಟ ಮಸೂದ್ ಕಾರನ್ನು ಚಲಾಯಿಸುತ್ತಿದ್ದರು. ಜೀಪಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.  ಮೃತ ಮೊಹಮ್ಮದ್ ಮಸೂದ್ ತಂದೆ ಅಬ್ದುಲ್ಲ, ತಾಯಿ ಜಮೀಲ, ಸಹೋದರ ಮೈಸೂಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

NO COMMENTS

LEAVE A REPLY