ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ ೧೦ ನಿಮಿಷದೊಳಗೆ ಕಳವು

0
36

ಮಂಜೇಶ್ವರ: ರಸ್ತೆ ಬದಿ ನಿಲ್ಲಿಸಿ ಅಂಗಡಿಗೆ ತೆರಳಿ ಹಿಂತಿರುಗುವ ಮಧ್ಯೆ ಸ್ಕೂಟರ್ ಕಳವುಗೈದ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ. ನಿನ್ನೆ ಸಂಜೆ ೬.೩೦ಕ್ಕೆ ಹೊಸಂ ಗಡಿಯಲ್ಲಿ ಘಟನೆ ನಡೆದಿದೆ. ಪಿರಾರಮೂಲೆ ನಿವಾಸಿ, ಸಾರಣೆ ಕಾರ್ಮಿಕ ಮೊಹಮ್ಮದ್ ಅಲಿ(೪೫) ಎಂಬವರು ತನ್ನ ಕೆ.ಎಲ್.೧೪ ಆರ್.೧೧೬೮ ನಂ ಬ್ರದ ಬಿಳಿ ಆಕ್ಟಿವಾ ಐಜಿಯನ್ನು ರಸ್ತೆ ಬದಿ ನಿಲ್ಲಿಸಿ ಅಂಗಡಿಗೆ ತೆರಳಿದ್ದರು. ಅಲ್ಲಿಂದ ಹಿಂತಿರುಗು ವಾಗ ಸ್ಕೂಟರ್ ನಾಪತ್ತೆ ಯಾಗಿದೆ. ಸ್ಕೂಟರ್‌ನಲ್ಲಿದ್ದ ಪರ್ಸ್ ಸಹಿತ ಹಲವು ದಾಖಲೆ ಗಳು ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY