೬.೧೫ ಕಿಲೋ ತಂಬಾಕು ಉತ್ಪನ್ನ ವಶ: ಓರ್ವ ಸೆರೆ

0
33

ಕಾಸರಗೋಡು: ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೬.೧೫ ಕಿಲೋ ತಂಬಾಕು ಉತ್ಪನ್ನಗಳನ್ನು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆ ಎಸ್.ಐ. ಮಧು ಮದನಾಟ್  ನೇತೃತ್ವದ ಪೊಲೀಸರು ವಶಪಡಿಸಿ ದ್ದಾರೆ. ಈ ಸಂಬಂಧ ಉತ್ತರ ಪ್ರದೇಶ ಪತ್ತೆಪುರದ ರವಿಶಂಕರ್ (೨೨) ಎಂಬಾತನನ್ನು ಸೆರೆ ಹಿಡಿದು ಕೇಸು ದಾಖಲಿಸಲಾಗಿದೆ.

ವಶಪಡಿಸಲಾದ ಮಾಲಿನಲ್ಲಿ ತಲಾ ೨೫ ಪ್ಯಾಕೆಟ್‌ನ ೨೫೦ ಕಟ್ಟ ತಂಬಾಕ್ ಉತ್ಪನ್ನಗಳು ಒಳಗೊಂ ಡಿವೆ. ಕೇರಳದಲ್ಲಿ ನಿಷೇಧ ಹೇರ ಲಾದ ಉತ್ಪನ್ನಗಳು ಇದಾಗಿದೆ. ನಿನ್ನೆ ಮಧ್ಯಾಹ್ನ  ಮಂ ಗಳೂರಿನಿಂದ ಚೆನ್ನೈ ಗೆ ಹೋಗುವ ಮೈಲ್ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಈ ಆರೋಪಿ ಮಾಲ ನ್ನು ಸಾಗಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY