ಅನಧಿಕೃತವಾಗಿ ನಿರ್ಮಿಸಿದ ಕಟ್ಟಡ ಮುರಿದು ತೆಗೆಯಲು ಆದೇಶ

0
48

ಕುಂಬಳೆ: ಅನಧಿಕೃತವಾಗಿ ಹಾಗೂ ಪಂಚಾಯತ್ ರಾಜ್ ಕಾಯ್ದೆಗಳನ್ನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡವನ್ನು ಮುರಿದು ತೆಗೆಯಬೇಕೆಂದು ತಿಳಿಸಿ ಕುಂಬಳೆ ಪಂಚಾಯತ್ ಕಾರ್ಯದರ್ಶಿ ಕಟ್ಟಡದ ಮಾಲಕನಿಗೆ ನೋಟೀಸು ನೀಡಿದ್ದಾರೆ. ಕುಂಬಳೆ ಪಂಚಾಯತ್ ಮೂರನೇ ವಾರ್ಡ್ ಬಂಬ್ರಾಣ ಮೊಗರಿನ ಎಂ.ಎಂ.ಇಬ್ರಾಹಿಂರಿಗೆ ನೋಟೀಸು ನೀಡಲಾಗಿದೆ. ಕಾನೂನು ಪ್ರಕಾರ ಅನುಮತಿ ಪಡೆದ ಬಳಿಕ ಅಂಗೀಕೃತ ಪ್ಲಾನ್ ಹೊರತು ಪಡಿಸಿ ಕೆ.ಪಿ.ಬಿ.ಆರ್. ಕಾಯ್ದೆಗಳನ್ನು ಪಾಲಿಸದೆ ಕಟ್ಟಡವನ್ನು ನಿರ್ಮಿಸಿರುವು ದಾಗಿ ನೋಟೀಸ್‌ನಲ್ಲಿ ತಿಳಿಸಲಾಗಿದೆ.

ಆದೇಶವನ್ನು ಪಾಲಿಸದಿದ್ದರೆ  ಕ್ರಮ ಕೈಗೊಳ್ಳುವುದಾಗಿ ನೋಟೀಸ್ ನಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ. ಅನಧಿಕೃತವಾಗಿ ನಿರ್ಮಿಸಿದ ಕಟ್ಟಡವನ್ನು ಒಂದು ವರ್ಷದಿಂದ ಕಾರು ವಾಷ್ ಸೆಂಟರ್ ಕಾರ್ಯಾಚ ರಿಸುತ್ತಿದೆಯೆಂದೂ ಇದರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕುಂಬಳೆ ಮಳಿಯ ಸುಬ್ರಹ್ಮಣ್ಯ ನಾಯ್ಕ್ ಮಾಹಿತಿ ಹಕ್ಕು ಕಾನೂನು ಪ್ರಕಾರ ಪಂಚಾಯತ್‌ನ್ನು ಸಮೀಪಿಸಿದ್ದರು.

NO COMMENTS

LEAVE A REPLY