ಕ್ರಿಕೆಟಿಗ ಶ್ರೀಶಾಂತ್ ಮೇಲಿನ ನಿಷೇಧ ರದ್ದು

0
52

ಹೊಸದಿಲ್ಲಿ: ಕ್ರಿಕೆಟಿಗ ಕೇರಳದ ವೇಗಿ ಎಸ್.ಶ್ರೀಶಾಂತ್ ಮೇಲೆ ಬಿ.ಸಿ.ಸಿ.ಐ ಹೇರಿದ್ದ ಅಜೀವಾಂತ ನಿಷೇಧವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಶಿಕ್ಷಾ ಅವಧಿಯನ್ನು ಮರು ಪರಿಶೀಲಿಸುವಂತೆಯೂ ಸುಪ್ರೀಂಕೋರ್ಟ್ ಬಿಸಿಸಿಐಗೆ ನಿರ್ದೇಶ ನೀಡಿದೆ. ಅದಕ್ಕಾಗಿ ನ್ಯಾಯಾಲಯ ಮೂರು ತಿಂಗಳ ಸಮಯವಕಾಶವನ್ನು ನೀಡಿದೆ.

ಶ್ರೀಶಾಂತ್ ತಪ್ಪಿತಸ್ಥನೆಂಬ ಬಿಸಿಸಿಐಯ ನಿಲುವನ್ನು ಸರಿಯೆಂದು ಸುಪ್ರೀಂಕೋರ್ಟ್ ತಿಳಿಸಿದ್ದು, ಆದರೆ ಜೀವನಾದ್ಯಂತ ನಿಷೇಧ ಹೇರುವುದು ಸರಿಯಲ್ಲವೆಂದು ನ್ಯಾಯಾಲಯ ತಿಳಿಸಿದೆ. ನ್ಯಾಯಾಲಯ ನೀಡಿದ ತೀರ್ಪು ತನಗೆ ಹರ್ಷ ತಂದಿದೆ. ಅದನ್ನು ನಾನು ಸ್ವಾಗತಿಸುವೆ. ಇನ್ನು ನನ್ನ ಗಮನವನ್ನು ಪೂರ್ಣವಾಗಿ ಕ್ರಿಕೆಟ್‌ನಲ್ಲೇ ಕೇಂದ್ರೀಕರಿಸುವೆನೆಂದು ಶ್ರೀಶಾಂತ್ ತಿಳಿಸಿದ್ದಾರೆ.

NO COMMENTS

LEAVE A REPLY