ಅಸೌಖ್ಯ: ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ನಿಧನ

0
50

ಕುಂಬಳೆ: ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ನಾಯ್ಕಾಪು ಮೋಹನ ರಾವ್ (೬೨) ನಿಧನ ಹೊಂದಿದರು. ತಲಪಾಡಿ- ಧರ್ಮತ್ತಡ್ಕ ರೂಟ್‌ನ ಎಸ್.ಎನ್. ಬಸ್‌ನಲ್ಲಿ ನಿರ್ವಾಹಕರಾಗಿ ದುಡಿದಿದ್ದರು. ನಾಯ್ಕಾಪು ಪೇಟೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಭಜನೆ ಹಾಡುಗಾರರಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಅಸೌಖ್ಯ ನಿಮಿತ್ತ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಅಪರಾಹ್ನ ನಿಧನ ಹೊಂದಿದರು.

ಮೃತರು ಪತ್ನಿ ಶಾಲಿನಿ, ಮಕ್ಕಳಾದ ಅಜೇಯ, ಜಿತೇಶ್, ಪ್ರವೀಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತರ ಮನೆಗೆ ಬ್ಲಾಕ್ ಪಂಚಾಯತ್ ಸದಸ್ಯ ಸತ್ಯಶಂಕರ ಭಟ್, ಪಂ. ಸದಸ್ಯರಾದ ಮುರಳೀಧರ ಯಾದವ್, ರಮೇಶ್ ಭಟ್ ಮೊದಲಾದವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

NO COMMENTS

LEAVE A REPLY