ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಯ ಸೆರೆ

0
29

ಕಾಸರಗೋಡು: ರಸ್ತೆ ಬದಿ ಹೋಟೆಲ್‌ಗಳ ತ್ಯಾಜ್ಯಗಳನ್ನು ತಂದೆಸೆದ ವ್ಯಕ್ತಿಯನ್ನು ವಿದ್ಯಾನಗರ ಎಸ್.ಐ. ಬಾಬು ಮೋಹನ್‌ರ ನೇತೃತ್ವದ ಪೊಲೀಸರು ಬಂಧಿಸಿ ಆತನ ವಿರುದ್ಧ ಕೇಸು ದಾಖಲಿಸಿ ದ್ದಾರೆ. ಚೆಂಗಳ ಚೇರೂರಿನ ಅಬ್ದುಲ್ ರಶೀದ್ ಎಂಬಾತನನ್ನು ಬಂಧಿಸಿ  ಕೇಸು ದಾಖಲಿಸಲಾಗಿದೆ. ಚೆರ್ಕಳ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ಹೋಟೆಲ್‌ಗಳ ತ್ಯಾಜ್ಯಗಳನ್ನು ತಂದೆಸೆದುದಕ್ಕೆ ಸಂಬಂಧಿಸಿ ಅಬ್ದುಲ್ ರಶೀದ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

NO COMMENTS

LEAVE A REPLY