ನಿಲ್ಲಿಸದೆ ಪರಾರಿಯಾದ ಕಾರನ್ನು ಬೆನ್ನಟ್ಟಿ ವಶ

0
47

ಮಂಜೇಶ್ವರ: ವಾಹನ ತಪಾಸಣೆ ವೇಳೆ ನಿಲ್ಲಿಸದೇ ಪರಾರಿಯಾದ ಕಾರನ್ನು ಬೆನ್ನಟ್ಟಿ ಮಂಜೇಶ್ವರ ಪೊಲೀಸರು ವಶಪಡಿಸಿದ ಘಟನೆ ನಡೆದಿದೆ. ನಿನ್ನೆ ಎಸ್‌ಐ ಸುಭಾಶ್ಚಂದ್ರನ್ ನೇತೃತ್ವದಲ್ಲಿ ತೂಮಿನಾಡಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ತಲಪಾಡಿ ಭಾಗದಿಂದ ಉಪ್ಪಳ ಕಡೆಗೆ ಆಗಮಿಸುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದರೂ ಪರಾರಿಯಾಗಿದೆ. ಈ ವೇಳೆ ಕಾರನ್ನು ಬೆನ್ನಟ್ಟಿ ಕುಂಜತ್ತೂರಿನಿಂದ ವಶಕ್ಕೆ ತೆಗೆದುಕೊಂಡರು. ಇದರಲ್ಲಿದ್ದ ಚಾಲಕ ಮಣ್ಣಂಗುಳಿ ನಿವಾಸಿ ಮೊಹಮ್ಮದ್ ಹನೀಫ್ (೪೨)ನನ್ನು ಸೆರೆ ಹಿಡಿದಿದ್ದಾರೆ. ಮದ್ಯ ಸೇವಿಸಿ ವಾಹನ ಚಲಾವಣೆ, ಪೊಲೀಸರು ಕೈ ತೋರಿಸಿದರೂ ನಿಲ್ಲಿಸದೆ ಪರಾರಿಯಾದ ಪ್ರಕರಣದಲ್ಲಿ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY