ಸಿಪಿಎಂ ಕಾರ್ಯಕರ್ತ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಮೃತದೇಹ ಪರಿಯಾರಂಗೆ

0
24

ಕಾಸರಗೋಡು: ಸಿಪಿಎಂ ಕಾರ್ಯಕರ್ತನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪೆರಿಯ ಬಳಿಯ ಕಲ್ಯೋಟ್ ಮಾವುಂಗಾಲ್ ನಿವಾಸಿ ಕೃಷ್ಣನ್ (೫೦) ಎಂಬವರು ಮೃತಪಟ್ಟ ವ್ಯಕ್ತಿ ಯಾಗಿದ್ದಾರೆ. ಮೂಲತಃ ಕುತ್ತಿ ಕ್ಕೋಲ್ ನಿವಾಸಿಯಾದ ಇವರು ಕೆಲವು ವರ್ಷಗಳ ಹಿಂದೆ ಕಲ್ಯೋಟ್ ಮಾವುಂಗಾಲ್‌ನಲ್ಲಿ ವಾಸಿಸುತ್ತಿದ್ದು, ತೆಂಗಿನ ಕಾಯಿ ಸುಲಿಯುವ ಕೆಲಸ ನಿರ್ವಹಿಸುತ್ತಿದ್ದರು.

ನಿನ್ನೆ ರಾತ್ರಿ ಕಲ್ಯೋಟ್ ಬಳಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಮನೆಗೆ ತೆರಳಿದ್ದರು. ರಾತ್ರಿ ೧೨.೩೦ರ ತನಕ ಅವರು ಅಲ್ಲಿದ್ದರು. ಆದರೆ ಬಳಿಕ ಅವರು ಮನೆಗೆ ತಲುಪಿರಲಿಲ್ಲ್ಲವೆನ್ನಲಾಗಿದೆ. ಇಂದು ಬೆಳಿಗ್ಗೆ ಮನೆಯಿಂದ ಅಲ್ಪ ದೂರದಲ್ಲಿ ಮರವೊಂದಕ್ಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೇ ವೇಳೆ ಇವರ ಚಪ್ಪಲಿಗಳು ಹಾಗೂ ಚಾಕುವೊಂದು ದಾರಿಯಲ್ಲಿ ಬಿದ್ದಿರುವುದು ಕಂಡು ಬಂದಿದೆಯೆನ್ನಲಾಗುತ್ತಿದೆ. ಮೃತದೇಹವನ್ನು ಸಮಗ್ರ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.  ರಾಮ-ಕಲ್ಯಾಣಿ ದಂಪತಿಯ ಪುತ್ರನಾದ ಮೃತರು ಪತ್ನಿ ಸರಸ್ವತಿ, ಮಕ್ಕಳಾದ ವಿಷ್ಣುಪ್ರಸಾದ್, ಪ್ರಸೀದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY