ಬ್ಯೂಟಿ ಪಾರ್ಲರ್ ಶೂಟ್‌ಔಟ್: ಇಬ್ಬರ ಸೆರೆ: ಸುಫಾರಿ ನೀಡಿದ್ದು ಕಾಸರಗೋಡಿನ ತಂಡ-ಕ್ರೈಂಬ್ರಾಂಚ್

0
38

ಕೊಚ್ಚಿ: ಕೊಚ್ಚಿಯಲ್ಲಿ ನಟಿ ಲೀನಾ ಮರಿಯಾ ಪೋಲ್‌ರ ಮಾಲಕತ್ವದಲ್ಲಿರುವ ನೈಲ್ ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕ್ರೈಂಬ್ರಾಂಚ್ ಇಬ್ಬರನ್ನು ಸೆರೆ ಹಿಡಿದಿದೆ. ಎರ್ನಾ ಕುಳಂ ನಿವಾಸಿಗಳಾದ ಬಿಲಾಲ್ ಮತ್ತು ವಿಪಿನ್ ಎಂಬವರು ಬಂಧಿತ ರಾದ ಆರೋಪಿಗಳಾಗಿದ್ದಾರೆ.

ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ ಈ ಇಬ್ಬರು ಆರೋಪಿ ಗಳಿಗೆ ಮುಂಬೈ ಭೂಗತ ದೊರೆ ರವಿ ಪೂಜಾರಿಯೊಂದಿಗೆ ನಂಟು ಹೊಂ ದಿರುವ ಕಾಸರಗೋಡಿನ ತಂಡ ವೊಂದು ಸುಫಾರಿ ನೀಡಿತ್ತೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಕ್ರೈಂಬ್ರಾಂಚ್ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಬಿಲಾಲ್ ಏಳು ಪ್ರಕರಣಗಳು ಮತ್ತು ವಿಪಿನ್ ಇತರ ಮೂರು ಕ್ರಿಮಿನಲ್ ಪ್ರಕರಣಗಳಲ್ಲೂ ಆರೋಪಿಗಳಾಗಿ ದ್ದಾರೆಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ಬ್ಯೂಟಿ ಪಾರ್ಲರ್‌ಗೆ ಶೂಟ್‌ಔಟ್ ನಡೆಸಲು ಈ ಇಬ್ಬರಿಗೆ ಕಾಸರಗೋಡಿನ ತಂಡ ಒಂದು ಕೋಟಿ ರೂ. ಸುಫಾರಿ ನೀಡಿತ್ತು. ಆದರೆ ಒಂದು ಕೋಟಿ ರೂ. ಬದಲು ತಮಗೆ ಕೇವಲ ೩೦೦೦೦ ರೂ. ಮಾತ್ರವೇ ನೀಡಲಾಗಿದೆಯೆಂದು ಬಂಧಿತರು ಹೇಳಿಕೆ ನೀಡಿರುವುದಾಗಿ ಕ್ರೈಂಬ್ರಾಂಚ್ ತಿಳಿಸಿದೆ.

ಗುಂಡು ಹಾರಾಟದ ಹಿಂದೆ ಭಾರೀ ಒಳಸಂಚು ಹೂಡಲಾಗಿದೆ. ಅದರಲ್ಲಿ ಕೊಲ್ಲಂ ನಿವಾಸಿಯಾಗಿರುವ ಓರ್ವ ವೈದ್ಯನ ಪಾಲುದಾರಿಕೆಯೂ ಇದೆ. ಅವರ ಹೊರತಾಗಿ ಈ ಪ್ರಕರಣದಲ್ಲಿ ಇನ್ನು ಹಲವು ಮಂದಿ ಒಳಗೊಂಡಿದ್ದಾರೆ. ಬ್ಯೂಟಿ ಪಾರ್ಲ ರ್‌ಗೆ ಗುಂಡು ಹಾರಿಸಲು ಬಳಸಿದ ಬಂದೂಕುಗಳನ್ನು ಬಂಧಿತರಾದ ಇಬ್ಬರಿಂದ ವಶಪಡಿಸಲಾಗಿದೆ ಎಂದು ಕ್ರೈಂಬ್ರಾಂಚ್ ಅಧಿಕಾರಿಗಳು ತಿಳಿಸಿದ್ದಾರೆ.

ನಟಿ ಲೀನಾ ಮರಿಯಾ ಪೋಲ್‌ರ ಮಾಲಕತ್ವದಲ್ಲಿ ಕೊಚ್ಚಿ ಕಡವತ್ರದಲ್ಲಿರುವ ನೈಲ್ ಬ್ಯೂಟಿ ಪಾರ್ಲರ್‌ಗೆ ಕಳೆದ ಡಿಸೆಂಬರ್ ೧೫ರಂದು ಬೈಕ್‌ನಲ್ಲಿ ಬಂದ ಇಬ್ಬರು ಗುಂಡು ಹಾರಿಸಿದ್ದರು. ಗುಂಡು ಚಲಾಯಿಸಿದ್ದು ನನ್ನ ಬಂಟರು ಆಗಿದ್ದಾರೆಂದು ಬಳಿಕ ಭೂಗತ ದೊರೆ ರವಿ ಪೂಜಾರಿ ಸುದ್ದಿ ಚಾನಲ್‌ವೊಂದಕ್ಕೆ ತಿಳಿಸಿದ್ದನು. ನಟಿ ಲೀನಾ ಮರಿಯಾರನ್ನು ಬೆದರಿಸಿ ಈಕೆ ಅವರಿಂದ ೨೫ ಕೋಟಿ ರೂ. ಎಗರಿಸುವ ಉದ್ದೇಶದಿಂದ ಬ್ಯೂಟಿ ಪಾರ್ಲರ್‌ಗೆ ಗುಂಡು ಚಲಾಯಿಸ ಲಾಗಿದೆಯೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ತನಿಖಾ ತಂಡ ತಿಳಿಸಿದೆ. ಬಂಧಿತರಾದ ಇಬ್ಬರು ಈ ಹಿಂದೆ ಹಲವು ಬಾರಿ ಕಾಸರಗೋಡಿಗೆ ಬಂದು ಸುಫಾರಿ ಹಣದ ಬಗ್ಗೆ ಚರ್ಚೆ ನಡೆಸಿದ್ದರೆಂದೂ ಕ್ರೈಂಬ್ರಾಂಚ್ ತಿಳಿಸಿದೆ.

NO COMMENTS

LEAVE A REPLY