ಮರಳು ಸಾಗಾಟ ಎರಡು ಟಿಪ್ಪರ್ ವಶ

0
69

ಮಂಜೇಶ್ವರ: ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ. ಕರ್ನಾಟಕದಿಂದ ಹೊಸಂಗಡಿ ಮೂಲಕ ಕಾಸರಗೋಡು ಭಾಗಕ್ಕೆ ಸಾಗುತ್ತಿದ್ದ ಮರಳು ಸಾಗಾಟದ ಎರಡು ಟಿಪ್ಪರ್ ಲಾರಿಗಳನ್ನು ನಿನ್ನೆ ಬೆಳಿಗ್ಗೆ ಎಸ್.ಐ. ಸುಭಾಶ್ಚಂದ್ರನ್ ನೇತೃತ್ವದಲ್ಲಿ ವಾಹನ ತಪಾಸಣೆ ವೇಳೆ ಸುಂಕದ ಕಟ್ಟೆಯ ಸುಳ್ಯಮೆ ರಸ್ತೆಯಿಂದ ವಶಪಡಿಸಲಾಗಿದೆ. ಈ ಚಾಲಕರಾದ ಬಂಟ್ವಾಳ ನಿವಾಸಿ ಶರೀಫ್ (೩೨), ಧಾರವಾಡ ನಿವಾಸಿ ಇಮಾಮುಲ್ಲ (೫೫) ಎಂಬವರನ್ನು ಸೆರೆ ಹಿಡಿದಿದ್ದಾರೆ.

NO COMMENTS

LEAVE A REPLY