ಪ್ರಧಾನಮಂತ್ರಿ ಇಂದು ಕಲ್ಲಿಕೋಟೆಗೆ

0
38

ಕಲ್ಲಿಕೋಟೆ: ಎನ್‌ಡಿಎ ಚುನಾವಣೆಯ ಪ್ರಚಾರದಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಕಲ್ಲಿಕೋಟೆಗೆ ಆಗಮಿಸಲಿದ್ದಾರೆ. ಕಲ್ಲಿಕೋಟೆ ಕಡಲ ಕಿನಾರೆಯಲ್ಲಿ ಸಂಜೆ ೬.೩೦ಕ್ಕೆ ನಡೆಯುವ ವಿಜಯ ಸಂಕಲ್ಪ ರ‍್ಯಾಲಿಯಲ್ಲಿ ಪ್ರಧಾನಮಂತ್ರಿ ಮಾತನಾಡುವರು. ವಿಶೇಷ ವಿಮಾನದಲ್ಲಿ ಸಂಜೆ ೬.೧೦ಕ್ಕೆ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ತಲುಪುವ ಪ್ರಧಾನಿ, ಅಲ್ಲಿಂದ ವಾಹನದಲ್ಲಿ ಕಡಪ್ಪುರಕ್ಕೆ ತಲುಪುವರು. ೭.೧೦ಕ್ಕೆ ಮರಳುವರು. ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳ ಎನ್‌ಡಿಎ ಅಭ್ಯರ್ಥಿಗಳು, ರಾಷ್ಟ್ರೀಯ, ರಾಜ್ಯ ನೇತಾರರು, ಕಾರ್ಯಕರ್ತರು ಉಪಸ್ಥಿತರಿರುವರು.

NO COMMENTS

LEAVE A REPLY