ಪೊಲೀಸರು ವಶಪಡಿಸಿರುವುದಾಗಿ ನಂಬಿಸಿ ೭೫೦೦ ಡಾಲರ್ ಎಗರಿಸಿದ ಪ್ರಕರಣ: ಮಂಜೇಶ್ವರದ ಇಬ್ಬರ ಸೆರೆ

0
78

ಮಂಜೇಶ್ವರ: ವಾಹನ ತಪಾಸಣೆ ವೇಳೆ ತಮ್ಮ ಕೈಯಲ್ಲಿದ್ದ ಐದೂವರೆ ಲಕ್ಷ ರೂ. ಮೌಲ್ಯದ ೭೫೦೦ ಅಮೆರಿಕನ್ ಡಾಲರ್ ಪೊಲೀಸರು ವಶಪಡಿಸಿದ್ದರೆಂದು ಸುಳ್ಳು ಹೇಳಿ ಹಣವನ್ನು ಲಪಟಾಯಿ ಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರದ ಇಬ್ಬರನ್ನು ವಡಗರ ಡಿವೈಎಸ್ಪಿ ಪಿ.ಪಿ. ಸದಾನಂದನ್‌ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಮಂಜೇಶ್ವರ ಕಡಂಬಾರು ನಿವಾಸಿಗಳಾದ ಮೊಹಮ್ಮದ್ ಅಸ್ಕರ್(೨೨), ಮೊಹಮ್ಮದ್ ಅರ್ಶಾದ್(೧೯) ಬಂಧಿತರಾದ ಆರೋಪಿಗಳಾಗಿದ್ದಾರೆ.

ಮಂಜೇಶ್ವರದ ವಿದೇಶ ವಿನಿಮಯ ಸಂಸ್ಥೆಯೊಂದರ ಮಾಲಕರೋರ್ವರು ಗಲ್ಫ್‌ಗೆ ಸಾಗಿಸಲೆಂದು ಗಲ್ಫ್‌ಗೆ ತೆರಳುವ ಯುವಕನೋರ್ವನ ಕೈಯಲ್ಲಿ ೭೫೦೦ ಡಾಲರ್ ನೀಡಿದ್ದನು. ಆತನ ಜತೆ ಆರೋಪಿಗಳಾದ ಮೊಹಮ್ಮದ್ ಅಸ್ಕರ್ ಮತ್ತು ಮೊಹಮ್ಮದ್ ಅರ್ಶಾದ್ ಕೂಡಾ ಕಾರಿನಲ್ಲಿ ಕಲ್ಲಿಕೋಟೆಯ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ಕಳೆದ ಗುರುವಾರ ಹೊರಟಿದ್ದರು. ಆ ವೇಳೆ ಚೋಂಬಾಲ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶವೊಂದರಲ್ಲಿ ನಾಲ್ವರು ಪೊಲೀಸರು  ತಮ್ಮ ಕಾರು ನಿಲ್ಲಿಸಿ ತಪಾಸಣೆಗೊಳಪಡಿಸಿ ದರೆಂದೂ ಆಗ ತಮ್ಮ ಬ್ಯಾಗ್‌ನಲ್ಲಿದ್ದ ಡಾಲರನ್ನು ಅವರು ಪತ್ತೆಹಚ್ಚಿ ವಶಪಡಿಸಿಕೊಂಡರೆಂದೂ,  ಹಣ ಕೈವಶವಿರಿಸಿಕೊಂಡಿದ್ದ ಯುವಕ ಬಳಿಕ ಅಲ್ಲಿಂದ ಗಲ್ಫ್‌ಗೆ ಹೋದನೆಂದು ಆರೋಪಿಗಳು ಆ ಹಣ ನೀಡಿದ ಮಾಲಕನಲ್ಲಿ ತಿಳಿಸಿದ್ದರು. ಆ ಬಗ್ಗೆ  ಆರೋಪಿಗಳು ಮತ್ತು ಆ ಹಣದ ಮಾಲಕ ವಡಗರ ಡಿವೈಎಸ್ಪಿಗೆ ದೂರು ನೀಡಿದ್ದರು. ಆ ಬಗ್ಗೆ ಡಿವೈಎಸ್ಪಿ ಇತರ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿ ವಿಚಾರಿಸಿ ದಾಗ ತಾವು ಯಾವುದೇ ಡಾಲರ್ ಹಿಡಿದಿಲ್ಲವೆಂದು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.  ಅದರಿಂದ ಶಂಕೆಗೊಂಡ ಡಿವೈಎಸ್ಪಿ ದೂರು ನೀಡಿದ ಆರೋಪಿಗಳಾಗಿರುವ ಯುವಕರನ್ನು ಮತ್ತೆ ಸಮಗ್ರವಾಗಿ ವಿಚಾರಿಸಿದಾಗ  ಸತ್ಯ ಬಾಯಿಬಿಟ್ಟು ಡಾಲರ್ ಎಗರಿಸಿದ್ದು ತಾವೆ ಆಗಿದ್ದೇವೆಂದು ಅವರು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಳಿಕ ವಡಗರ ಪೊಲೀಸರು ಮಂಜೇಶ್ವರಕ್ಕೆ ಆಗಮಿಸಿ ನಡೆಸಿದ ಶೋಧ ಕಾರ್ಯಾಚರಣೆ ಯಲ್ಲಿ ಆರೋಪಿಗಳು ಎಗರಿಸಿದ ೭೫೦೦ ಡಾಲರನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆ ಡಾಲರನ್ನು ರೂಪಾಯಿ ಯನ್ನಾಗಿ ಬದಲಾಯಿಸಲು ಮಂಜೇಶ್ವರ ಎರಡು ಸಂಸ್ಥೆಗಳಿಗೆ ಆರೋಪಿಗಳು ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY