ಅಡ್ಕತ್ತಬೈಲಿನ ಕ್ವಾರ್ಟರ್ಸ್‌ನಿಂದ ೧೫ ಪವನ್ ಚಿನ್ನಾಭರಣ, ೧೦೦೦೦ ರೂ., ಮೊಬೈಲ್ ಕಳವು

0
94

ಕಾಸರಗೋಡು: ಹಾಡಹಗಲೇ ಕ್ವಾರ್ಟರ್ಸ್‌ಗೆ ನುಗ್ಗಿದ ಕಳ್ಳರು ೧೫ ಪವನ್ ಚಿನ್ನಾಭರಣ, ೧೦,೦೦೦ ರೂಪಾಯಿ ಹಾಗೂ ಒಂದು ಮೊಬೈಲ್ ಫೋನ್ ಕಳವು ನಡೆಸಿದ್ದಾರೆ.

ಅಡ್ಕತ್ತಬೈಲ್ ಗುಡ್ಡೆ ಕ್ಷೇತ್ರ ಸೆಕೆಂಡ್ ಕ್ರಾಸ್ ರೋಡ್‌ನಲ್ಲಿರುವ ಕ್ವಾರ್ಟ ರ್ಸ್‌ನಲ್ಲಿ ನಿನ್ನೆ ಹಾಡಹಗಲೇ ಈ ಕಳ್ಳತನ ನಡೆದಿದೆ. ಈ ಕ್ವಾರ್ಟರ್ಸ್‌ನ ಒಂದನೇ ಮಹಡಿ ಯಲ್ಲಿ ವಾಸಿಸುವ ರುಖಿಯ ಎಂಬವರ ನಗ-ನಗದು ಕಳವು ನಡೆದಿದೆ. ರುಖಿಯ ಹಾಗೂ ಇಬ್ಬರು ಮಕ್ಕಳು ಈ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆ ಕ್ವಾರ್ಟರ್ಸ್‌ಗೆ ಬೀಗ ಜಡಿದು ರುಖಿಯ ಕೆಲಸಕ್ಕೆ, ಓರ್ವ ಪುತ್ರಿ ಸಂಬಂಧಿಕರ ಮನೆಗೆ ಹಾಗೂ ಇನ್ನೋರ್ವೆ ಹೊಲಿಗೆ ಕಲಿಯಲೆಂದು ತೆರಳಿದ್ದರು. ಸಂಜೆ ವೇಳೆ  ರುಖಿಯ ಮರಳಿದಾಗ ಕ್ವಾರ್ಟರ್ಸ್‌ನ ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಒಳಗೆ ಪ್ರವೇಶಿಸಿ ನೋಡಿದಾಗ ಕಪಾಟಿ ನಲ್ಲಿರಿಸಿದ್ದ ನಗ-ನಗದು ಹಾಗೂ ಮೊಬೈಲ್ ಕಳವಿಗೀಡಾಗಿರುವುದು ಅರಿವಿಗೆ ಬಂದಿದೆ. ತೆಂಗಿನ ಕಾಯಿ ಸುಲಿಯುವ ಕಬ್ಬಿಣದ ಸಲಾಖೆ ಬಳಸಿ ಕ್ವಾರ್ಟರ್ಸ್‌ನ ಬಾಗಿಲ ಬೀಗ ಮುರಿಯಲಾಗಿದೆಯೆಂದು ತಿಳಿದುಬಂದಿದೆ.

ಕಳವು ಬಗ್ಗೆ ರುಖಿಯ ನೀಡಿದ ದೂರಿನಂತೆ ನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಲುಪಿ ಪರಿಶೀಲನೆ ನಡೆಸಿದೆ. ಇದೇ ವೇಳೆ  ಕ್ವಾರ್ಟರ್ಸ್‌ನ ಸಮೀಪ ಸ್ಥಾಪಿಸಿರುವ ಸಿಸಿ ಟಿವಿ ಕ್ಯಾಮರದಲ್ಲಿ ಅಪರಿಚಿತ ವ್ಯಕ್ತಿಯ ಚಿತ್ರವೊಂದು ಸೆರೆಯಾಗಿದ್ದು, ಇದು ಕಳ್ಳನದ್ದಾಗಿರಬಹುದೇ ಎಂಬ ಸಂಶಯವುಂಟಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

NO COMMENTS

LEAVE A REPLY