ಹುಲ್ಲು ಹಾಸಿದ ಮನೆ ಬೆಂಕಿಗಾಹುತಿ

0
32

ಅಡೂರು: ಹುಲ್ಲು ಹಾಸಿದ ಮನೆಯೊಂದು ಬೆಂಕಿಗಾಹುತಿಯಾಗಿ ನಾಶಗೊಂಡಿದ್ದು, ಅಪಾರ ನಾಶನಷ್ಟವುಂಟಾಗಿದೆ.

ಅಡೂರು ಬಳಿಯ ಮುಡೂರು ಎಂಬಲ್ಲಿನ ಭರತ್‌ರ ಮನೆ ಇಂದು ಮುಂಜಾನೆ ೨ಗಂಟೆ ವೇಳೆ ಬೆಂಕಿಗಾಹುತಿಯಾಗಿದೆ. ಘಟನೆ ವೇಳೆ ಮನೆಯಲ್ಲಿ ಭರತ್, ಅವರ ಸಹೋದರ ಲಕ್ಷ್ಮೀಶ ಹಾಗೂ ಕುಟುಂಬವಿತ್ತು. ಮುಂಜಾನೆ ೨ ಗಂಟೆ ವೇಳೆ ನಿದ್ದೆಯಲ್ಲಿದ್ದ ಇವರಿಗೆ ಶಬ್ದ ಕೇಳಿ ಎದ್ದು ನೋಡಿದಾಗ ಮನೆ ಉರಿಯುತ್ತಿರುವುದು ಕಂಡುಬಂದಿದೆ. ಕೂಡಲೇ ಎಲ್ಲರೂ ಹೊರಗೋಡಿದುದರಿಂದ ಅಪಾಯದಿಂದ ಪಾರಾಗಿದ್ದಾರೆ.  ವಿಷಯ ತಿಳಿದು ತಲುಪಿದ ನೆರೆಮನೆ ನಿವಾಸಿಗಳು ಬೆಂಕಿ ನಂದಿಸಲು ಸಹಾಯವೊದಗಿಸಿದರು. ಆದರೆ ಬೆಂಕಿ ಶೀಘ್ರವೇ ಹರಡಿ ಮನೆ ಪೂರ್ಣ ನಾಶಗೊಂಡಿದೆ. ಮನೆಯಲ್ಲಿದ್ದ ವಿವಿಧ ದಾಖಲೆಪತ್ರಗಳು ಉರಿದು ನಾಶಗೊಂಡಿರುವುದಾಗಿ ಹೇಳಲಾಗುತ್ತಿದೆ. ಮನೆಯ ಸಮೀಪವೇ ಹುಲ್ಲು ಹಾಸಿದ ಕೊಟ್ಟಿಗೆಯಿದ್ದು, ಅದು ಕೂಡಾ ಬೆಂಕಿಗಾಹುತಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.

NO COMMENTS

LEAVE A REPLY