ಬಂದಡ್ಕ ನಿವಾಸಿ ಸುಳ್ಯದ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

0
38

ಬಂದಡ್ಕ: ಮಾಣಿಮೂಲೆ ನಿವಾಸಿಯೊಬ್ಬರು ಕರ್ನಾಟಕದ ಸುಳ್ಯದ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಣಿಮೂಲೆ ನಿವಾಸಿ ಜೋಸ್ ಕಿಳಕ್ಕೇದಿಲ್(೫೦) ಎಂಬವರು ಮೃತಪಟ್ಟ ವ್ಯಕ್ತಿಯೆಂದು  ತಿಳಿಸಲಾಗಿದೆ. ನಿನ್ನೆ ಸಂಜೆ ಇವರ ಮೃತದೇಹ ಹೊಳೆಯಲ್ಲಿ ಕಂಡು ಬಂದಿದ್ದು, ಈ ಬಗ್ಗೆ ಮಾಹಿತಿ ಲಭಿಸಿದ ಸುಳ್ಯ ಪೊಲೀಸರು ತೆರಳಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಹೊಳೆಯಲ್ಲಿ ಸ್ನಾನಕ್ಕಿಳಿದಾಗ ಹೃದಯಾಘಾತವುಂಟಾಗಿ ಮೃತಪಟ್ಟಿ ರಬಹುದೆಂದು ಅಂದಾಜಿಸಲಾಗಿದೆ.

NO COMMENTS

LEAVE A REPLY