ಹದಿನೈದರ ಬಾಲಕ ಮತ್ತೆ ನಾಪತ್ತೆ

0
87

ಕುಂಬಳೆ: ಇತ್ತೀಚೆಗೆ ನಾಪತ್ತೆ ಯಾಗಿ ಬಳಿಕ ಬಸ್‌ನಲ್ಲಿ ಪತ್ತೆಯಾದ ಹದಿನೈದರ ಹರೆಯದಬಾಲಕ ಮತ್ತೆ ಕಾಣೆಯಾಗಿದ್ದಾನೆಂದು ದೂರಲಾಗಿದೆ. ಚಿರ್ತೋಡಿ ಅರಫಾ ಮಂಜಿಲ್‌ನ ಮರಿಯುಮ್ಮಾರ ಪುತ್ರ ಮುಹಮ್ಮದ್ ಅನ್ಶಾದ್ (೧೫) ನಾಪತ್ತೆಯಾದ ಬಾಲಕನಾಗಿದ್ದಾನೆ. ಈತಿಂಗಳ ೯ರಂದು ಬಾಲಕ ನಾಪತ್ತೆಯಾ ಗಿದ್ದನು. ಈಬಗ್ಗೆ ತಾಯಿ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಹುಡುಕಾಟ ನಡೆಸುತ್ತಿದ್ದಾಗ ನಿನ್ನೆ ಬೆಳಿಗ್ಗೆ ಉಪ್ಪಳ ನಯಾಬಜಾರ್‌ನಲ್ಲಿ ಬಸ್‌ನಲ್ಲಿ ಬಾಲಕ ಪತ್ತೆಯಾಗಿದ್ದನು. ಬಾಲಕನನ್ನು ಕಸ್ಟಡಿಗೆ ತೆಗೆದ ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಅನಂತರ  ಮನೆಯವರಿಗೆ ಹಸ್ತಾಂತರಿಸ ಲಾಗಿತ್ತು. ಮನೆಗೆ ತಲುಪಿದ ಬಳಿಕ ನಿನ್ನೆ ಸಂಜೆ ಯಿಂದ ಬಾಲಕ ಮತ್ತೆ ನಾಪತ್ತೆಯಾ ಗಿದ್ದಾನೆಂದು ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY