ಬಸ್‌ನಲ್ಲಿ ಕಾಸರಗೋಡಿನತ್ತ ಸಾಗಿಸುತ್ತಿದ್ದ ಸ್ಪೋಟಕ ವಸ್ತು ವಶ: ಓರ್ವ ಕಸ್ಟಡಿಗೆ

0
65

ಮುಳ್ಳೇರಿಯ: ಕರ್ನಾಟಕ ಭಾಗದಿಂದ  ಕಾಸರಗೋಡಿನತ್ತ ಬಸ್‌ನಲ್ಲಿ ಸಾಗಿಸುತ್ತಿದ್ದ ಸ್ಪೋಟಕ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವನನ್ನು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ೭ ಗಂಟೆಗೆ ಕೊಟ್ಯಾಡಿಯಲ್ಲಿ ಮುಳ್ಳೇರಿಯ ರೇಂಜ್ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಮೂಲತಃ ತಮಿಳುನಾಡಿನ ಕೊಯಂಬತ್ತೂರು ನಿವಾಸಿಯೂ ಪ್ರಸ್ತುತ ಸುಳ್ಯ ಸಮೀಪ ಕಲ್ಲುಗುಂಡಿಯಲ್ಲಿ ವಾಸಿಸುತ್ತಿರುವ ರಾಮಸ್ವಾಮಿ ಎಂಬವರ ಪುತ್ರ ವಿಜಯನ್ (೪೦)ನನ್ನು ಕಸ್ಟಡಿಗೆ ತೆಗೆಯಲಾಗಿದ್ದು, ಈತನನ್ನು ತನಿಖೆಗೊಳಪಡಿಸಲಾಗುತ್ತಿದೆ.

ಸುಳ್ಯದಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಅಧಿಕಾರಿಗಳು ಕೊಟ್ಯಾಡಿಯಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟ ೫೦ ಜಿಲಾಸ್ಟಿಕ್ ಸ್ಟಿಕ್‌ಗಳು ಹಾಗೂ ೫೦ ಬತ್ತಿಗಳನ್ನು ಪತ್ತೆಹಚ್ಚಲಾಗಿದೆ. ಪ್ಲಾಸ್ಟಿಕ್ ಚೀಲದೊಳಗೆ ಸ್ಫೋಟಕ ವಸ್ತುಗಳನ್ನುತುಂಬಿಸಿ ಅದರ ಮೇಲೆ ತರಕಾರಿಗಳನ್ನಿಡಲಾಗಿತ್ತು. ಇದರ ವಾರಿಸುದಾರ ವಿಜಯನ್ ಎಂದು ಆಗಿದ್ದಾನೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಆತನನ್ನು ಕಸ್ಟಡಿಗೆ ತೆಗೆದು ಆದೂರು ಪೊಲೀಸರಿಗೆ ಹಸ್ತಾಂತರಿಸಿ ರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳ ಸಹಿತ ವಿವಿಧೆಡೆಗಳಲ್ಲಿ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ತಪಾಸಣೆ ಬಿಗುಗೊಳಿಸಿದ್ದಾರೆ.

NO COMMENTS

LEAVE A REPLY