ಗುಜರಾತ್‌ನಲ್ಲಿ ಹೆರಾಯಿನ್ ವಶ ಪ್ರಕರಣ: ಕಾಸರಗೋಡಿನಲ್ಲಿ ತೀವ್ರ ತನಿಖೆ

0
73

ಕಾಸರಗೋಡು: ಗುಜರಾತ್‌ನ ಪೋರ್ ಬಂದರ್‌ನಿಂದ ೧೦೦ ಕಿಲೋ ಹೆರಾಯಿನ್ ಸಹಿತ ತಂಡವೊಂದು ಸೆರೆಗೀಡಾದ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಮಾದಕವಸ್ತು ಸಾಗಾಟ ತಂಡದ ಲ್ಲಿದ್ದ ವ್ಯಕ್ತಿಗಳ ಪೈಕಿ ಓರ್ವ ಕಾಸರ ಗೋಡು ನಿವಾಸಿಯಾಗಿದ್ದಾನೆಂದು ಖಚಿತಗೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಯುತ್ತಿದೆ. ಸೆರೆಗೀಡಾದ ಎಂಟು ಮಂದಿ ತಂಡದಲ್ಲಿ ಓರ್ವ ಕಾಸರಗೋಡು ಎರಿಯಾಲ್ ಚೌಕಿ ಕುನ್ನಿಲ್ ನಿವಾಸಿಯಾಗಿದ್ದಾನೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಾಸರ ಗೋಡಿನಲ್ಲಿ ಸ್ಥಳೀಯ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.

ಪಾಕಿಸ್ತಾನದಿಂದ ಮಾದ ಕವಸ್ತುವನ್ನು ಹಡಗು ಮೂಲಕ ಸೌದಿ ಅರೇಬಿಯಕ್ಕೆ ಸಾಗಿಸಲು ತಂಡ ಉದ್ದೇಶಿಸಿತ್ತು. ಈ ಬಗ್ಗೆ ಲಭಿಸಿದ ಮಾಹಿತಿ ಯಂತೆ ಗುಜರಾತ್ ಪೊಲೀಸರ ಉಗ್ರ ನಿಗ್ರಹದಳ ಕಾರ್ಯಾಚರಣೆ ನಡೆಸಿ ತಂಡವನ್ನು ಬಂಧಿಸಿದೆ. ವಶಪಡಿಸಿಕೊಂಡ ಹೆರಾಯಿನ್‌ಗೆ ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ೫೦೦ ಕೋಟಿ ರೂಪಾಯಿ ಮೌಲ್ಯ ಅಂದಾ ಜಿಸಲಾಗಿದೆ.

NO COMMENTS

LEAVE A REPLY