ಪ್ರಥಮ ರ‍್ಯಾಂಕಿಗನಿಗೆ ಇಂಗ್ಲೀಷ್‌ನಲ್ಲಿ ೯೬: ಮರು ಮೌಲ್ಯಮಾಪನಕ್ಕೆ ನಿರ್ಧಾರ

0
73

ಬದಿಯಡ್ಕ: ಕರ್ನಾಟಕದ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಬದಿಯಡ್ಕದ ವಿದ್ಯಾರ್ಥಿಗೆ ಪ್ರಶಂಸೆಯ ಸುರಿಮಳೆ. ವಿವಿಧ ವ್ಯಕ್ತಿಗಳು, ಸಂಘ ಸಂಸ್ಥೆ ಪ್ರತಿನಿಧಿಗಳು ವಿದ್ಯಾರ್ಥಿಯನ್ನು ಪ್ರಶಂಸಿಸಿದ್ದಾರೆ.

ಬದಿಯಡ್ಕ ಸಮೀಪದ ಕಡಪ್ಪು ಸುಬ್ರಹ್ಮಣ್ಯ ಭಟ್- ಶಾರದಾ ದಂಪತಿ ಪುತ್ರ ಕೃಷ್ಣಶರ್ಮ ಈ ಹೆಗ್ಗಳಿಕೆಗೆ ಪಾತ್ರರಾದವರು. ೬೦೦ರಲ್ಲಿ ೫೯೬ ಅಂಕಗಳನ್ನು ಪಡೆದ ಕೃಷ್ಣ ಶರ್ಮ ಬದಿಯಡ್ಕ ಭಾರತೀಯ ವಿದ್ಯಾಪೀಠದ ಹಳೆ ವಿದ್ಯಾರ್ಥಿ ಹಾಗೂ ಇದೀಗ ವಿಟ್ಲ ಅಳಿಕೆ ಶ್ರೀ ಸತ್ಯಸಾಯಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ. ಸಂಸ್ಕೃತ, ಬಿಸ್‌ನೆಸ್ ಸ್ಟಡಿ, ಸಂಖ್ಯಾ ಶಾಸ್ತ್ರ, ಲೆಕ್ಕ, ಮೂಲಗಣಿತ ಎಂಬಿವುಗಳಲ್ಲಿ ೧೦೦ ರಂತೆ ಅಂಕಗಳನ್ನು ಪಡೆದ ಕೃಷ್ಣ ಶರ್ಮ, ಇಂಗ್ಲಿಷ್‌ನಲ್ಲಿ ಮಾತ್ರ ೯೬ ಮಾರ್ಕ್ ಪಡೆದಿದ್ದಾನೆ. ತನಗೆ ಇಂಗ್ಲಿಷ್‌ನಲ್ಲಿಯೂ ೧೦೦ ಸಿಗಬೇಕಿದ್ದು, ತಾನು ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವುದಾಗಿ ಕೃಷ್ಣ ಶರ್ಮ ಹೇಳಿದ್ದಾರೆ. ಮುಂದೆ ಚಾರ್ಟೆಡ್ ಅಕೌಂಟ್ ಕಲಿಯುವ ಬಗ್ಗೆಯೂ ಕೃಷ್ಣ ಶರ್ಮ ಒಲವು ಹೊಂದಿದ್ದಾರೆ. ಈತನಿಗೆ ಲಭಿಸಿದ ರ‍್ಯಾಂಕ್ ಬದಿಯಡ್ಕಕ್ಕೆ ಉತ್ಸವ ಛಾಯೆ ಮೂಡಿಸಿದೆ.

NO COMMENTS

LEAVE A REPLY