ವರದಕ್ಷಿಣೆಗಾಗಿ ನವವಧುವಿಗೆ ಕಿರುಕುಳ: ಪತಿ ಸಹಿತ ನಾಲ್ಕು ಮಂದಿ ವಿರುದ್ಧ ಕೇಸು ದಾಖಲು

0
63

ಕುಂಬಳೆ: ವರದಕ್ಷಿಣೆಗಾಗಿ ಒತ್ತಾಯಿಸಿ ನವವಧುವಿಗೆ ಕಿರುಕುಳ ನೀಡಿದ ಆರೋಪದಂತೆ ಆಕೆಯ ಪತಿ ಸಹಿತ ನಾಲ್ಕು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

 ಇಚ್ಲಂಪಾಡಿ ದರ್ಬಾರ್ ಕಟ್ಟೆಯ  ಇಬ್ರಾಹಿಂರ ಪುತ್ರಿ ಸುಮಯ್ಯ (೨೩) ನೀಡಿದ ದೂರಿನಂತೆ ಈಕೆಯ ಪತಿ ಪೇರಾಲ್ ಕಣ್ಣೂರು ನಿವಾಸಿ ಸಾದಿಕ್, ಸಂ ಬಂಧಿಕರಾದ ಶಮೀಮ, ಮೊಹಮ್ಮದ್, ಅಬ್ದುಲ್ಲ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಸುಮಯ್ಯ ಹಾಗೂ ಸಾದಿಕ್‌ರ ವಿವಾಹ ೨೦೧೮ ಡಿಸೆಂಬರ್ ೨೩ರಂದು ನಡೆದಿತ್ತು. ಈ ವೇಳೆ ೩೦ ಪವನ್ ಚಿನ್ನಾಭರಣವನ್ನು ನೀಡಲಾಗಿತ್ತು. ಆದರೆ ಅನಂತರವೂ ಹೆಚ್ಚುವರಿ ವರದಕ್ಷಿಣೆ ತರಬೇಕೆಂದು ಒತ್ತಾಯಿಸಿ ಸುಮಯ್ಯರಿಗೆ ಪತಿ ಹಾಗೂ ಸಂಬಂಧಿಕರು ಸೇರಿ ಶಾರೀರಿಕ, ಮಾನಸಿಕ ಕಿರುಕುಳ ನೀಡುತ್ತಿ ರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. 

NO COMMENTS

LEAVE A REPLY