ಪೊಲೀಸ್ ಬ್ಯಾಲೆಟ್ ಪೇಪರ್ ಅವ್ಯವಹಾರ ಕ್ರಮ ಇಂದು

0
36

ತಿರುವನಂತಪುರ: ಪೊಲೀಸರ ಅಂಚೆ ಮತ ಬ್ಯಾಲೆಟ್‌ನಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬುದನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲೋಕ ನಾಥ್  ಬೆಹ್ರಾ ಖಾತರಿಪಡಿಸಿ ಆ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಆ ವರದಿಯನ್ನು ಮುಖ್ಯ ಚುನಾವಣಾ ಅಧಿಕಾರಿ ಟೀಕಾರಾಮ್ ಮೀಣ ಅಂಗೀಕರಿಸಿದ್ದು ತಪ್ಪಿತಸ್ಥನ ವಿರುದ್ಧ ಕ್ರಮಕೈ ಗೊಳ್ಳಲು ಅನುಮತಿ ನೀಡಿದ್ದಾರೆ. ಚುನಾವಣಾ ಅಧಿಕಾರಿ ಯವರ ನಿರ್ದೇ ಶ ಪ್ರಕಾರ ತಪ್ಪಿತಸ್ಥ ಪೊಲೀಸರ ವಿರುದ್ಧ ಇಂದೇ ಸೂಕ್ತ ಕ್ರಮಕೈಗೊಳ್ಳಲಾಗುವು ದೆಂದು ಬೆಹ್ರಾ ತಿಳಿಸಿದ್ದಾರೆ.ಈ ವಿಷಯದಲ್ಲಿ ಕೇರಳ ಪೊಲೀಸ್ ಅಸೋಸಿಯೇಶನ್ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಸಿ ೧೫ ದಿನಗಳೊಳಗಾಗಿ ವರದಿ ಸಲ್ಲಿಸುವಂತೆಯೂ ಮುಖ್ಯ ಚುನಾವಣಾ ಅಧಿಕಾರಿ ಬೆಹ್ರಾರಿಗೆ ನಿರ್ದೇಶ ನೀಡಿದ್ದಾರೆ.

NO COMMENTS

LEAVE A REPLY