ಕಾರು ಢಿಕ್ಕಿ ಹೊಡೆದು ಮೀನು ಕಾರ್ಮಿಕ ಮೃತ್ಯು

0
42

ಕಾಸರಗೋಡು: ಮೀನು ಕಾರ್ಮಿಕನೋರ್ವ ಕಾರು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಬೇಕಲ ತಂಬುರಾನ್‌ವಳಪ್ಪ್ ವೇಲಿಪುರಂ ಹೌಸ್‌ನ ಕಣ್ಣನ್ ಎಂಬವರ ಪುತ್ರ ಬಾಬು.ಕೆ (೫೮) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ರಾತ್ರಿ ೧೦.೧೫ರ  ವೇಳೆ ಬೇಕಲ ಸೇತುವೆ ಬಳಿ ಅಪಘಾತ ಸಂಭವಿಸಿದೆ. ಬಾಬು ರಸ್ತೆ ದಾಟುತ್ತಿ ದ್ದಾಗ ಬಂದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಉದುಮದ ಆಸ್ಪತ್ರೆಗೂ ಬಳಿಕ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಪತ್ನಿ ಯಮುನ, ಮಕ್ಕಳಾದ ಲಕ್ಷ್ಮೀ, ಭವಿತ, ಅಳಿಯಂದಿರಾದ ಬದೀಶ್, ರಿಜು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇದೇ ವೇಳೆ ಬಾಬು ಅಪಘಾತದಲ್ಲಿ ಮೃತಪಟ್ಟ ಬಗ್ಗೆ ತಿಳಿದು ಪತ್ನಿ ಯಮುನ ಕುಸಿದು ಬಿದ್ದು ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

NO COMMENTS

LEAVE A REPLY