ಸ್ಕೂಟರ್ ಢಿಕ್ಕಿ ಹೊಡೆದು ಪಾದಚಾರಿ ಗಾಯ: ಸವಾರನ ವಿರುದ್ಧ ಕೇಸು

0
32

ಉಪ್ಪಳ: ನಡೆದು ಹೋಗುತ್ತಿದ್ದ ವ್ಯಕ್ತಿಗೆ ಸ್ಕೂಟರ್ ಢಿಕ್ಕಿ ಹೊಡೆದು ಗಾಯಗೊಂಡ ಸಂಬಂಧ ಸವಾರನ ವಿರುದ್ಧ ಮಂಜೇಶ್ವರ ಪೊಲೀಸರ ಕೇಸು ದಾಖಲಿಸಿದ್ದಾರೆ. ಬಾಯಿಕಟ್ಟೆ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಅಬೂಬಕ್ಕರ್ (೬೫) ಗಾಯಗೊಂಡವರು. ಈ ತಿಂಗಳ ೮ರಂದು ಸಂಜೆ ೭.೩೦ರ ವೇಳೆ ಬಾಯಿಕಟ್ಟೆಯಲ್ಲಿ ನಡೆದು ಹೋಗುತ್ತಿದ್ದಾಗ ಪೈವಳಿಕೆಯಿಂದ ಕೈಕಂಬ ಭಾಗಕ್ಕೆ ತೆರಳುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದಿರುವುದಾಗಿ ದೂರಲಾಗಿದೆ. ಗಾಯಾಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

NO COMMENTS

LEAVE A REPLY