ಮಾಜಿ ನಗರಸಭಾ ಕೌನ್ಸಿಲರ್‌ಗೆ ಹಲ್ಲೆ

0
35

ಕಾಸರಗೋಡು: ಹೊಸದುರ್ಗ ಮರಕ್ಕಾಪು ಕಡಪ್ಪುರದ ಮಾಜಿ ನಗರಸಭಾ ಸದಸ್ಯ, ಸಿಪಿಎಂನ ಪ್ರದೀಪ್ ಮರಕ್ಕಾಡುರಿಗೆ ತಂಡವೊಂದು ಹಲ್ಲೆ ನಡೆಸಿದೆ.  ಗಾಯಗೊಂಡ ಪ್ರದೀಪ್ ರನ್ನು ಹೊಸದುರ್ಗದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಿನ್ನೆ ಮಧ್ಯಾಹ್ನ ತಾನು ಮನೆ ಆವರಣದ ಬಳಿ ನಿಂತಿದ್ದಾಗ ಬೈಕ್‌ನಲ್ಲಿ ಅಲ್ಲಿಗೆ ಬಂದ ಇಬ್ಬರು ತನಗೆ ಹಲ್ಲೆ ನಡೆಸಿರುವುದಾಗಿ ಪ್ರದೀಪ್ ತಿಳಿಸಿದ್ದಾರೆ.

ಅದಕ್ಕೆ ಸಂಬಂಧಿಸಿ ಅಜಾನೂರು ಕಡಪ್ಪುರ ಮತ್ತಾಯಿಕುನ್ನಿನ  ಜಿತಿನ್ ಮತ್ತು ಅರುಣ್ ಎಂಬವರ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಸೆರೆಹಿಡಿದಿದ್ದಾರೆ. ಪ್ರದೀಪ್ ಜಿಲ್ಲಾ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಕಚೇರಿಯ ಸಿಬ್ಬಂದಿಯಾಗಿದ್ದಾರೆ.

NO COMMENTS

LEAVE A REPLY